ಕಾರವಾರ:- ಲಂಚ ಪಡೆದ ಆರೋಪದಲ್ಲಿ ಶಿರಸಿ ನಗರಸಭೆಯ ಹಾಲಿ ಬಿಜೆಪಿ ಸದಸ್ಯ ಗಣಪತಿ ನಾಯ್ಕ್ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಗಣಪತಿ ನಾಯ್ಕ್ ಮತ್ತು ನಗರಸಭೆಯ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಲೀಸ್‌ಗೆ ಪಡೆದ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಶಿರಸಿ ನಗರಸಭೆ ಬಿಜೆಪಿ ಸದಸ್ಯ ಗಣಪತಿ ನಾಯ್ಕ ಹಾಗೂ ನಗರಸಭೆ ಅಧಿಕಾರಿ ಆರ್.ಎಂ.ವರ್ಣೇಕರ್, ರಮೇಶ ಹೆಗಡೆ ಎಂಬುವರಿಂದ ಶಿರಸಿ ನಗರದ ರಿಲಾಯನ್ಸ್ ಕಚೇರಿ ಮುಂದೆ ಕಾರಿನಲ್ಲಿ 3 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಗಣಪತಿ ನಾಯ್ಕ ಮತ್ತು ಆರ್.ಎಂ.ವರ್ಣೇಕರ್ ಇಬ್ಬರನ್ನೂ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ಗಣಪತಿ ನಾಯ್ಕ ನಗರಸಭೆ ಪೈಪ್ ಕಳ್ಳತನ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.



