ಕಲಬುರಗಿ:- ಲಂಚ ಪಡೆಯುವಾಗ ತಹಸೀಲ್ದಾರ್ ಕಚೇರಿಯ ಎಸ್ ಡಿ ಎ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನಲ್ಲಿ ಜರುಗಿದೆ. ಶರಣಪ್ಪ ಲೋಕಾ ಬಲೆಗೆ ಬಿದ್ದ ಎಸ್ ಡಿ ಎ.
ಆರೋಪಿ ಶರಣಪ್ಪ ಅವರು, ಇಲ್ಲಿನ ಕಾಳಗಿಯ ಅಣಿವೀರಭದ್ರೇಶ್ವರ ದೇವಸ್ಥಾನ ಸಮೀಪದ ಸಿ.ಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಲು ಅಣವೀರಯ್ಯ ಹಿರೆಮಠ ಎಂಬಾತನ ಬಳಿ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ದೂರು ದಾಖಲಿಸಿ ಲೋಕಾ ಡಿ ವೈ ಎಸ್ ಪಿ ಗೀತಾ ಬೇನಾಳ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಲಾಗಿದೆ.
ಘಟನೆ ಸಂಬಂಧ ಲೋಕಾ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.



