ಚಿತ್ರದುರ್ಗ:- ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುವ ವೇಳೆ ಜಿಲ್ಲೆಯ ಹೊಸದುರ್ಗ ತಾಲೂಕು ಖಜಾನೆ ಮುಖ್ಯ ಲೆಕ್ಕಿಗ ಮತ್ತು FDA ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಜರುಗಿದೆ.
ಹೊಸದುರ್ಗ ತಾಲೂಕು ಖಜಾನೆ ಮುಖ್ಯ ಲೆಕ್ಕಿಗ ಗೋವಿಂದ ರಾಜ್ ಮತ್ತು FDA ವರಲಕ್ಷ್ಮಿ ಅವರು ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು ಎನ್ನಲಾಗಿದೆ.
ನಿವೃತ್ತ ಶಿಕ್ಷಕಿ ಶಾರದಮ್ಮ ಅವರು ತಮ್ಮ ಪೆನ್ಯನ್ ಅಮೌಂಟ್ ಸೆಟ್ಲ್ ಮೆಂಟ್ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ಆರೋಪಿತರು ಶಾರದಮ್ಮ ಅವರ ಬಳಿ, ತಲಾ 2000 ಲಂಚ ಕೇಳಿದ್ದಾರೆ.
ಈ ಬಗ್ಗೆ ಹೊಸದುರ್ಗ ನಗರದ ನಿವೃತ್ತ ಶಿಕ್ಷಕಿ ಶಾರದಮ್ಮ ಅವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಟ್ರ್ಯಾಪ್ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ನಿವೃತ್ತ ಶಿಕ್ಷಕಿ ಬಳಿ 2000 ರೂಪಾಯಿ ಹಣ ಪಡೆಯುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗುರುಬಸವರಾಜ್, ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.