ಬೆಂಗಳೂರು ಗ್ರಾಮಾಂತರ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕೊಳತೂರು ಗೇಟ್ ಬಳಿ ನಡೆದಿದೆ.
Advertisement
ಪ್ರಶಾಂತ್(26) ಮೃತ ದುರ್ದೈವಿಯಾಗಿದ್ದು, ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ನುಜ್ಜುಗುಜ್ಜಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಶಾಂತ್ ಸಾವನ್ನಪ್ಪಿದ್ದಾನೆ. ಹೊಸಕೋಟೆ ಸಂಚಾರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


