ದೊಡ್ಡಬಳ್ಳಾಪುರ: ಖಾಸಗಿ ಕಂಪನಿಗೆ ಸೇರಿದ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿಯ ವೇಳೆ ರಘುನಾಥಪುರ ಬಳಿ ನಡೆದಿದೆ.
Advertisement
ದೇವನಹಳ್ಳಿ ಮೂಲದ ಸಾಗರ್ (20) ಎಂಬ ಯುವಕನೇ ಮೃತನು. ಅಪಘಾತದ ವೇಳೆ ಸಾಗರ್ ಓಡಿಸುತ್ತಿದ್ದ ಬುಲೆಟ್ ಬೈಕ್ ಬಸ್‌ಗೆ ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸಾಗರ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಫಾಕ್ಸ್‌ಕಾನ್ ಕಂಪನಿಯಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಈ ಅವಘಡಕ್ಕೆ ಒಳಪಟ್ಟಿದೆ. ಘಟನೆಯ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.