Accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ- ಸ್ಥಳದಲ್ಲೇ ಯುವಕ ದುರ್ಮರಣ!

0
Spread the love

ಬೀದರ್:- ಜಿಲ್ಲೆಯ ಚಿಟಗುಪ್ಪ ತಾಲೂಕಿನ ಉಡಬಾಳ ಗ್ರಾಮದ ಕ್ರಾಸ್ ಬಳಿ ಕಾರು ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ಉಮೇಶ್ ಮೃತ ದುರ್ದೈವಿ. ಅತೀ ವೇಗವೆ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಅಪಘಾತ ಹಿನ್ನೆಲೆ ಕಾರು ನಾಲ್ಕೈದು ಬಾರಿ ಪಲ್ಟಿಯಾಗಿ ರಸ್ತೆ ಬದಿಗೆ ಬಂದು ಬಿದ್ದಿದೆ. ಮೃತ ಯುವಕ, ಉಡುಬಾಳ ಗ್ರಾಮದಿಂದ ಮನ್ನಾಏಖೇಳಿಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಯುವಕನ ಮೃತದೇಹವನ್ನು ಚಿಟಗುಪ್ಪ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬೆಮ್ಮಳಖೇಡಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಮ್ಮಳಕೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here