ಯಾದಗಿರಿ: ಯಾದಗಿರಿ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಹಿಂಬದಿಯಿಂದ ಐಚರ್ ವಾಹನ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಸರ್ಕಾರಿ ಪದವಿ ಕಾಲೇಜಿನ ಬಳಿ ನಡೆದಿದೆ.
Advertisement
ಮೊನ್ನೆ ರಾತ್ರಿ ನಡೆದಿದ್ದ ಅಪಘಾತವು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಮೃತನಾದ ವ್ಯಕ್ತಿಯನ್ನು ಯಾದಗಿರಿ ನಗರದ ಲಕ್ಷ್ಮೀ ಬಡಾವಣೆ ನಿವಾಸಿ ಈಶಪ್ಪ (42) ಎಂದು ಗುರುತಿಸಲಾಗಿದೆ. ಐಚರ್ ಟೆಂಪೋ ಬೈಕ್‌ಗೆ ಗುದ್ದಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಘಟನೆಯ ಮಾಹಿತಿಯ ಮೇರೆಗೆ ಯಾದಗಿರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನದ ಚಾಲಕನ ಪತ್ತೆ ಹಾಗೂ ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.


