ನೆಲಮಂಗಲ:- ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ಕಾರು ರಿವರ್ಸ್ ತೆಗೆಯುವ ಸಂದರ್ಭ ಮಗುವಿನ ಮೇಲೆ ಹರಿದು ಮಗು ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
ಒಂದೂವರೆ ವರ್ಷದ ನೂತನ್ ಕಾರು ಚಕ್ರದಡಿಗೆ ಸಿಲುಕಿ ಮೃತಪಟ್ಟ ಮಗು. ಮೋಹನ್ ಅಕ್ಕ ದೇವಿಕಾ ಹಾಗೂ ಭಾವ ಮುನೇಶ್ ಶನಿವಾರ ಬೆಳಗ್ಗೆ ಮೋಹನ್ ಅವರ ಮನೆಗೆ ಬಂದಿದ್ದರು. ಮನೆಯಿಂದ ಹೊರಟು ಕಾರನ್ನು ರಿವರ್ಸ್ ತೆಗೆಯುವ ವೇಳೆ ದುರ್ಘಟನೆ ಸಂಭವಿಸಿದೆ.
ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದ ಮಗುವನ್ನು ಗಮನಿಸದೇ ಕಾರು ಚಲಾಯಿಸಿದ ಪರಿಣಾಮ ಮಗು ಮೃತಪಟ್ಟಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


