ಕೆರೆಯಲ್ಲಿ ಈಜಲು ಹೋಗಿ ಅವಘಡ: ಇಬ್ಬರು ಬಾಲಕರು ನೀರುಪಾಲು

0
Spread the love

ಹಾಸನ:- ಅರಸೀಕೆರೆ ತಾಲ್ಲೂಕಿನ ಹುಂಡಿಗನಾಳು ಗ್ರಾಮದಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಐವರು ಅಪ್ರಾಪ್ತ ಮಕ್ಕಳಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

Advertisement

ಮೃತ ಮಕ್ಕಳನ್ನು ವಿಜಯಕುಮಾರ (13), ಸುಜನ್ (12) ಎಂದು ಗುರುತಿಸಲಾಗಿದೆ. ಇಂದು ರಜೆ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತ ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದರು. ಐವರಲ್ಲಿ ಉಂಡಿಗನಾಳು ಗ್ರಾಮದ ಶಿವಕುಮಾರ ಅವರ ಮಗ ವಿಜಯಕುಮಾರ ಮತ್ತು ಗಿರೀಶ ಅವರ ಮಗ ಸುಜನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ ಮಕ್ಕಳ ಮೃತದೇಹ ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here