ಚಾಮರಾಜನಗರ:- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಕಾವೇರಿ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಜರುಗಿದೆ.
Advertisement
23 ವರ್ಷದ ಸಾಹಿಲ್ ಪಾಷ ಮೃತ ಯುವಕ. ಈತ ಬೆಂಗಳೂರಿನ ಜೆಪಿ ನಗರದ ನಿವಾಸಿ ಎನ್ನಲಾಗಿದೆ. ಬಂಡೆಗಳ ಸಮೀಪ 9 ಜನ ಯುವಕರ ಗುಂಪು ಈಜಲು ಹೋಗಿದ್ದರು. ರಂಜಾನ್ ಹಬ್ಬ ಮುಗಿದ ಹಿನ್ನೆಲೆ ಶಿವನಸಮುದ್ರ ದರ್ಗಾಕ್ಕೆ ಯುವಕ ಬಂದಿದ್ದ. ಪ್ರಾರ್ಥನೆ ಸಲ್ಲಿಸಿ ನಂತರ ವೆಸ್ಲಿ ಸೇತುವೆಯ ಬಳಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.