ಮಂಗಳೂರು:- ಮಂಗಳೂರು ಹೊರವಲಯದ ಸುರತ್ಕಲ್‌ನ ಎನ್‌ಐಟಿಕೆ ಬೀಚ್‌ನಲ್ಲಿ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜರುಗಿದೆ. ಸಮುದ್ರದಲ್ಲಿ ಈಜಲು ತೆರಳಲು ಹೋಗಿ ಅವಘಡ ಸಂಭವಿಸಿದೆ.
Advertisement
ಮೃತ ಬಾಲಕರನ್ನು 18 ವರ್ಷದ ಧ್ಯಾನ್ ಬಂಜನ್, 15 ವರ್ಷದ ಹನೀಶ್ ಕುಲಾಲ್ ಎಂದು ಗುರುತಿಸಲಾಗಿದೆ. ಸಮುದ್ರದಲ್ಲಿ ಈಜಲು ಬಾಲಕರು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ತಕ್ಷಣ ಲೈಫ್ ಗಾರ್ಡ್‌ಗಳು ಧ್ಯಾನ್‌ನನ್ನ ರಕ್ಷಿಸಿದರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಹನೀಶ್ ಸಮುದ್ರ ಪಾಲಾಗಿದ್ದು, ಈಜುಗಾರರ ತಂಡದಿಂದ ಹುಡುಕಾಟ ನಡೆಯುತ್ತಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.