ದಾವಣಗೆರೆ:- ಬಟ್ಟೆ ತೊಳೆಯಲು ಹೋಗಿ ಅವಘಡ ಸಂಭವಿಸಿ ನೀರಲ್ಲಿ ಮುಳುಗಿ ಮೂವರು ಮಹಿಳೆಯರು ದುರ್ಮರಣ ಹೊಂದಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಜರುಗಿದೆ.
Advertisement
28 ವರ್ಷದ ದಿವ್ಯ, 19 ವರ್ಷದ ಚಂದನಾ, 23 ವರ್ಷದ ದೀಪಾ ಮೃತರು. ಮಹಿಳೆಯರು ಲಕ್ಷ್ಮೀ ಸಾಗರ ಗ್ರಾಮದ ಹೊಸ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಚನ್ನಗಿರಿ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಸ್ಥಳಕ್ಕೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.