ಕೋಲಾರ: ಕಲ್ಲು ಕ್ರಷರ್ ನಲ್ಲಿ ಕೆಲಸ ಮಾಡುವ ವೇಳೆ ಕಲ್ಲು ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕುನ ಟೇಕಲ್ ನ ಮಾಕಾರಹಳ್ಳಿ ಬಳಿ ನಡೆದಿದೆ.
Advertisement
ಆಂದ್ರ ಮೂಲದ ಕಾರ್ಮಿಕ ವೆಂಕಟೇಶ್ (62) ಸಾವನ್ನಪ್ಪಿದ ದುರ್ಧೈವುಯಾಗಿದ್ದು, ಹರೀಶ್ ಮತ್ತು ಈಶ್ಚರ್ ಎಂಬುವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಲಾಸ್ಟಿಂಗ್ ತಯಾರಿ ವೇಳೆ ಕಲ್ಲು ಬಂಡೆ ಬಿದ್ದು ಅವಘಡ ಸಂಭವಿಸಿದ್ದು,
ಸ್ಥಳಕ್ಕೆ ಎಸ್ಪಿ ನಿಖಿಲ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.