ಆಕಸ್ಮಿಕ ಅಗ್ನಿ ಅವಘಡ: ಸ್ಕ್ರಾಪ್ ಗೋಡೌನ್ ಬೆಂಕಿಗಾಹುತಿ!

0
Spread the love

ಗೊಟ್ಟಿಗೆರೆ:- ಆಕಸ್ಮಿಕ ಅಗ್ನಿ ಕಾಣಿಸಿಕೊಂಡ ಹಿನ್ನೆಲೆ ಸ್ಕ್ರಾಪ್ ಗೋಡೌನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರಾಯಲ್ ಕೌಂಟಿಂ ಪಾರ್ಕ್ ಹಿಂಬಾಗದಲ್ಲಿ ಜರುಗಿದೆ.

Advertisement

ಬೆಂಕಿಯ ಕೆನ್ನಾಲಿಗೆಗೆ ಗೋಡೌನ್ ನಲ್ಲಿದ್ದ ಸ್ಕ್ರಾಪ್ ಐಟಮ್ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಸ್ತಗಿರ್ ಎಂಬುವರಿಗೆ ಸೇರಿರುವ ಸ್ಕ್ರಾಪ್ ಗೋಡೌನ್ ಇದಾಗಿದ್ದು, ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಗ್ನಿ ಶಾಮಕದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಕೋಣನಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here