ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ನಾವು ಸಿಸಿಬಿ ಪೊಲೀಸರು ಅಂತಾ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ಮಾಡಿರುವ ಘಟನೆ ಜರುಗಿದೆ. ಪೊಲೀಸ್ ಇನ್ಫಾರ್ಮರ್ ಆಗಿದ್ದವನೇ ಪೊಲೀಸರ ಅತಿಥಿ ಆಗಿದ್ದಾನೆ.ತಾನು ಸಿಸಿಬಿ ಆಫೀಸರ್ ಅಂತ ಟೀಮ್ ಕರ್ಕೊಂಡು ಹೋಗಿ ವ್ಯಕ್ತಿಯ ಕಿಡ್ನಾಪ್ ನಡೆದಿದ್ದು, ಅಪಹರಿಸಿ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದ. ಮಹಮ್ಮದ್ ಖಾಸಿಮ್ ಮುಜಾಯಿದ್ @ ಸೇಟು ಸಿಸಿಬಿ ಇನ್ಫಾರ್ಮರ್ ಆಗಿದ್ದ. ಇದೇ ಕಾರಣಕ್ಕೆ ಸಿಸಿಬಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಳ್ತಿದ್ದ. ಕಳೆದ ತಿಂಗಳು 27ನೇ ತಾರೀಖು ಕಾಲು ಸಿಂಗ್ ಎಂಬಾತ ಕಾರಿನಲ್ಲಿ ವಿವಿಪುರಂ ಬಳಿ ಬರುತ್ತಿದ್ದರು. ಇದೇ ವೇಳೆ ಸೇಟು ಅಂಡ್ ಟೀಂ ಕಾರು ಅಡ್ಡ ಹಾಕಿದ್ದರು.
ನೀನು ಗಾಂಜಾ ಪೆಡ್ಲರ್ ಎಂದು ಬೆದರಿಸಿದ್ದ ಖತರ್ನಾಕ್ ಗ್ಯಾಂಗ್ ಬೆದರಿಸಿದರು. ನಂತರ ಕಣ್ಣಿಗೆ ಬಟ್ಟೆ ಕಟ್ಟಿ ಸೀದಾ ವಿಲ್ಸನ್ ಗಾರ್ಡನ್ ನ ಒಂದು ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಕಾಲು ಸಿಂಗ್ ನ ಲಾಕ್ ಮಾಡಿ ಮಾರಾಕಾಸ್ತ್ರ ತೋರಿಸಿ ಬೆದರಿಸಿದ್ದರು. ನಂತರ ಕಾಲು ಸಿಂಗ್ ಮೊಬೈಲ್ ನಿಂದ ಆತನ ಸ್ನೇಹಿತನಿಗೆ ಫೋನ್ ಮಾಡಿದ್ದರು. ನಾವು ಸಿಸಿಬಿ ಅವ್ರು ಕಾಲುಸಿಂಗ್ ನ ಬಿಡಲು ಐದು ಲಕ್ಷ ಕೊಡಬೇಕು ಇಲ್ಲ ಅಂದ್ರೆ ಜೈಲಿಗೆ ಕಳುಸ್ತಿವಿ ಅಂತ ಧಮ್ಕಿ ಹಾಕಿದ್ದಾರೆ.ಈ ಸಂಬಂಧ ಸಿಸಿಬಿಗೆ ಕಾಲು ಸಿಂಗ್ ಮಾಹಿತಿ ನೀಡಿದ್ದರು. ಸದ್ಯ ಮಹ್ಮದ್ ಖಾಸಿಮ್ ಮುಜಾಯಿದ್ @ ಸೇಟು ಮುಕ್ತಿಯಾರ್,ವಸೀಮ್,ಶಬ್ಬೀರ್, ಹಾಗೂ ಶೋಹಿಬ್ ನ ಸಿಸಿಬಿ ಬಂಧಿಸಿದರು. ಘಟನೆ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ