ಬೆಂಗಳೂರಿನಲ್ಲಿ PG ಮುಂದೆ ಬುಲೆಟ್ ಬೈಕ್‌ಗೆ ಬೆಂಕಿ ಇಟ್ಟಿದ್ದ ಆರೋಪಿ ಅಂದರ್!

0
Spread the love

ಬೆಂಗಳೂರು:- ನಗರದಲ್ಲಿ PG ಮುಂದೆ ಬುಲೆಟ್ ಬೈಕ್‌ಗೆ ಬೆಂಕಿ ಇಟ್ಟಿದ್ದ ಆರೋಪಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಯನ್ನು 25 ವರ್ಷದ ಪುಲ್ಕಿತ್ ಎಂದು ಗುರುತಿಸಲಾಗಿದೆ. ಈತ ಪೀಣ್ಯಾದ ಹೆಚ್‌ಎಂಟಿ ಲೇಔಟ್‌ನ ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ. ಸೆ.19ರಂದು ಬೈಕ್‌ನಿಂದಲೇ ಪೆಟ್ರೋಲ್ ತೆಗೆದು ಅದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಇಷ್ಟು ಮಾತ್ರವಲ್ಲದೇ ಬೈಕ್‌ಗೆ ಹೊತ್ತಿಕೊಂಡ ಬೆಂಕಿಯಿಂದಲೇ ಸಿಗರೇಟ್‌ಗೆ ಬೆಂಕಿ ಹಚ್ಚಿ ಧಮ್ ಹೊಡೆದು ಎಸ್ಕೇಪ್ ಆಗಿದ್ದ. ಬುಲೆಟ್ ಬೈಕ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಮೂರು ಬೈಕ್‌ಗಳು ಬೆಂಕಿಗೆ ಆಹುತಿಯಾಗಿತ್ತು.

ಬೈಕ್ ಬೆಂಕಿಗಾಹುತಿಯಾದ ಬಳಿಕ ಬುಲೆಟ್ ಬೈಕ್ ಸವಾರ ದೀಪಾಂಶು ಎಂಬವರು ಈ ಬಗ್ಗೆ ಪೀಣ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದ್ದ ಪುಲ್ಕಿತ್‌ನನ್ನು ಪೀಣ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಖರೀದಿಸುವ ಆಸೆಯನ್ನು ಪುಲ್ಕಿತ್ ಹೊಂದಿದ್ದ. ಬುಲೆಟ್ ಖರೀದಿಗೆ ಹಣ ಹೊಂದಿಸಲಿಕ್ಕೆ ಆಗದಿದ್ದಾಗ ಬೇರೆಯವರ ಬುಲೆಟ್ ಬೈಕ್ ಸೌಂಡ್ ಆದರೆ ಕೋಪಗೊಳ್ಳುತ್ತಿದ್ದ. ಬುಲೆಟ್ ಬೈಕ್ ತೆಗೆದುಕೊಳ್ಳುವ ಆಸೆಯಿತ್ತು.

ಹಣವಿಲ್ಲದ್ದಕ್ಕೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಕೋಪಬಂದು ಪಿಜಿಗಳ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್‌ಗೆ ಬೆಂಕಿ ಹಚ್ಚಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here