ಬೆಂಗಳೂರು: ಬೆಂಗಳೂರು ಯೂನಿವರ್ಸಿಟಿಯಲ್ಲಿ ರಾತ್ರೋರಾತ್ರಿ ಗಂಧದ ಮರ ಕಡಿದು ಮಾರಾಟ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಜ್ಞಾನಭಾರತಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮನಗರ ಮೂಲದ ಸಾಕಯ್ಯ ಬಂಧಿತ ಆರೋಪಿಯಾಗಿದ್ದು, ರಾತ್ರೋರಾತ್ರಿ ಗಂಧದ ಮರ ಕಡಿದು ಮಾರಿದ್ದನು. ಪ್ರ
Advertisement
ಕರಣ ದಾಖಲಿಸಿ ತನಿಖೆ ನಡೆಸಿದ್ದ ಜ್ಞಾನಭಾರತಿ ಪೊಲೀಸರು ಆರೋಪಿಗಳ ಬೆನ್ನಟ್ಟಿ ರಾಮನಗರ ತೆರಳಿದ್ದರು. ಈ ವೇಳೆ ರಾಮನಗರ ಕಾಡಿನಲ್ಲಿ ಆರೋಪಿಗಳು ಅವಿತು ಕುಳಿತಿದ್ದರು. ಕಾಡಿನಲ್ಲಿ ಬೆನ್ನಟ್ಟಿ ಸಾಕಯ್ಯ ಎಂಬಾತನನ್ನು ಬಂಧಿಸಿದ್ದು, ಉಳಿದ ಇನ್ನು ಇಬ್ಬರು ಆರೋಪಿಗಳು ಸದ್ಯ ಪರಾರಿಯಾಗಿದ್ದು, ಬಂಧಿತನಿಂದ 115 ಕೆಜಿ ಶ್ರೀಗಂಧ ಮರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.