HomeDharwadಯರಿಕೊಪ್ಪ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆ

ಯರಿಕೊಪ್ಪ ಕಳ್ಳತನ ಪ್ರಕರಣದ ಆರೋಪಿಗಳ ಪತ್ತೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಲೂಕಿನ ಯರಿಕೊಪ್ಪ ಗ್ರಾಮದ ಹದ್ದಿಯ ಬಸಪ್ಪ ಯಲ್ಲಪ್ಪ ಸೂರ್ಯವಂಶಿ ಇವರ ಜಮೀನಿನಲ್ಲಿ ಅಳವಡಿಸಿದ್ದ ರಿಲೈನ್ಸ್ ಕಂಪನಿಯ ಮೊಬೈಲ್ ಟವರಿನ ಒಟ್ಟು 1,31,206 ರೂ ಬೆಲೆ ಇರುವ ಸ್ಯಾಮಸಂಗ್ ಕಂಪನಿಯ ಆರ್‌ಆರ್‌ಎಚ್ ರೆಡಿಯೋ ಹೆಡ್ ಕಳ್ಳತನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿತರನ್ನು ದಸ್ತಗೀರ ಮಾಡಿ ಕಾನೂನು ಕ್ರಮವನ್ನು ಜರುಗಿಸಿ, ಆರೋಪಿತರಿಂದ ಕಳ್ಳತನ ಮಾಡಲಾದ 4 ಸ್ಯಾಮಸಂಗ್ ಕಂಪನಿಯ ಆರ್.ಆರ್.ಎಚ್ ರೆಡಿಯೋ ಹೆಡ್, 2300 ಮತ್ತು 1800 ಎಮ್.ಹೆಚ್.ಜೆಡ್ ಬ್ಯಾಂಡ್ ಹಾಗೂ ಒಂದು ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ದಾಖಲಾದ 24 ಗಂಟೆಗಳ ಒಳಗೆ ಕ್ಷಿಪ್ರಗತಿಯಲ್ಲಿ ಆರೋಪಿತರನ್ನು ಬಂಧಿಸುವಲ್ಲಿ ಧಾರವಾಡ ಗ್ರಾಮೀಣ ಪಿಐ ಎಸ್.ಎಸ್. ಕಮತಗಿ ಹಾಗೂ ಎಲ್ & ಓ ಪಿ.ಎಸ್.ಐ ಪ್ರವೀಣ ಕೋಟಿ, ಪಿ.ಎಸ್.ಐ(ಅ) ಬಿ.ಆರ್. ಬಂಕಾಪೂರ, ಸಿಬ್ಬಂದಿಗಳಾದ ಕುಮಾರ ಕಾಂಬಳೆ, ಎ.ಬಿ. ಸೊರಟೂರು, ಎಮ್.ಎಸ್. ಜೊಡಗೇರಿ, ಮಾರುತಿ ಕುಂಬಾರ, ಮಹಾಂತೇಶ ನೆಟಗಲ್, ಶ್ರೀಧರ ಗುಗ್ಗರಿ, ಶಿದ್ದೇಶ್ವರ ಹಿರೇಮಠ, ಮಲ್ಲಪ್ಪ ಡಾಬೋಳಿ ಹಾಗೂ ವಿನಾಯಕ ಪಡಸಲಗಿ ಇವರನ್ನು ಒಳಗೊಂಡ ತಂಡ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪತ್ತೆ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!