ಆದರಹಳ್ಳಿ ಮನೆ ಕಳ್ಳತನ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನ | 14.50 ಲಕ್ಷ ರೂ ಮೌಲ್ಯದ ವಸ್ತುಗಳು ವಶಕ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ/ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿಯಲ್ಲಿ ಜುಲೈ 1ರಂದು ರಾತ್ರಿ 10 ಗಂಟೆಯಿAದ ಜುಲೈ 2ರ ಮುಂಜಾನೆ 5.30 ಗಂಟೆಯ ನಡುವೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರ ಪೈಕಿ ಇಬ್ಬರನ್ನು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ ಎಂದು ಎಸ್‌ಪಿ ರೋಹನ್ ಜಗದೀಶ್ ಮಾಹಿತಿ ನೀಡಿದರು.

Advertisement

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡುತ್ತಿದ್ದರು.

ಆದರಹಳ್ಳಿಯ ಸೋಗಿಹಾಳ ರಸ್ತೆಯಲ್ಲಿರುವ ಫಿರ್ಯಾದಿದಾರ ಮಂಗೇಶ ಲಮಾಣಿ ಅವರ ಮನೆ ಕಳ್ಳತನವಾಗಿತ್ತು. ಮನೆಯ ಕೀಲಿ ಮುರಿದು ಟ್ರಜರಿಯಲ್ಲಿಟ್ಟಿದ್ದ 5 ಗ್ರಾಂ ತೂಕದ ಬಂಗಾರದ ಬೋರಮಳ ಸರ, 2.5 ಗ್ರಾಂ ತೂಕದ ಬಂಗಾರದ ಬೆಂಡವಾಲಿ, 5 ಗ್ರಾಂ ತೂಕದ ಬಂಗಾರದ ಕೊರಳ ಚೈನ್, 2.5 ಗ್ರಾಂ ತೂಕದ ಬಂಗಾರದ ಡ್ರಾಪ್ ಗುಂಡುಗಳು ಸೇರಿ ಒಟ್ಟು 15 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿದ್ದವು.

ಅದೇ ದಿನ ಆದರಹಳ್ಳಿ ಗ್ರಾಮದ ಬಸ್ ಸ್ಟ್ಯಾಂಡ್ ಬಳಿಯಿರುವ ಮಾನಪ್ಪ ಸಣ್ಣರಾಮಪ್ಪ ವಡ್ಡರ, ಇವರ ಗ್ರಾಮ ಒನ್ ಸೆಂಟರ್‌ನ ಕೀಲಿ ಮುರಿದು ಅಂಗಡಿಯಲ್ಲಿದ್ದ ಒಟ್ಟು 18 ಸಾವಿರ ರೂ. ಮೊತ್ತದ ಒಂದು ಲ್ಯಾಪ್ಟಾಪ್ ಹಾಗೂ ಅದರ ಚಾರ್ಜರ್ ಸಮೇತ ಕಳ್ಳತನವಾದ ಬಗ್ಗೆ ಮಂಗೇಶ ಮಾಮಲೇಶಪ್ಪ ಲಮಾಣಿ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳಾದ 1-ಜಿ. ಸತೀಶಗೌಡ (35, ಯರಗೊಪ್ಪಾ, ಬಾಗಲಕೋಟೆ), 2-ಲಕ್ಷಣ ಯಲ್ಲಪ್ಪ ಮೊಣಕೇರ (25, ಬೆಳ್ಳಟ್ಟಿ, ಗದಗ), 3-ಚಂದ್ರ@ಕುರಡಚAದ್ರ (ಹಗಲಿಬೊಮ್ಮನಹಳ್ಳಿ, ವಿಜಯನಗರ) ಇವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಜೊತೆಗೆ, ಲಕ್ಷೇಶ್ವರ, ಶಿರಹಟ್ಟಿ, ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡಿದ ಪ್ರಕರಣಗಳಲ್ಲಿ ಆರೋಪಿತರಿಂದ 12 ಲಕ್ಷ ರೂ ಮೌಲ್ಯದ 122.5 ಗ್ರಾಂ ಬಂಗಾರದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, 20 ಸಾವಿರ ರೂ ಮೌಲ್ಯದ 150 ಗ್ರಾಂ ಬೆಳ್ಳಿಯ ಆಭರಣಗಳು, 2 ಸಾವಿರ ರೂ ಮೊತ್ತದ ಎರಡು ಮೊಬೈಲ್, 28 ಸಾವಿರ ರೂ ಮೌಲ್ಯದ 2 ಲ್ಯಾಪ್ಟಾಪ್‌ಗಳು, 4 ಬೈಕ್‌ಗಳೂ ಸೇರಿ ಒಟ್ಟು 14 ಲಕ್ಷ 50 ಸಾವಿರ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ ಅಧಿಕಾರಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್‌ಪಿ ರೋಹನ್ ಜಗದೀಶ್ ಘೋಷಣೆ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಸಿಇಎನ್ ಡಿಎಸ್‌ಪಿ ಮಹಾಂತೇಶ ಸಜ್ಜನ, ಡಿಎಸ್‌ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ ನೇತೃತ್ವದ ತಂಡದಲ್ಲಿ ಮುಳಗುಂದ ಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ಟಿ.ಕೆ. ರಾಠೋಡ, ಪಿಎಸ್‌ಐ ಚನ್ನಯ್ಯ ದೇವೂರ, ಪಿಎಸ್‌ಐ ನಾಗರಾಜಗಡದ, ಪಿಎಸ್‌ಐ ಶೇಖರ ಕಡಬಿನ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎನ್.ಎ. ಮೌಲ್ವಿ, ಎಂ.ಎ. ಶೇಖ, ಎಂ.ಎಸ್. ಬಳ್ಳಾರಿ, ಎ.ಆರ್. ಕಮ್ಮಾರ, ಡಿ.ಎಸ್. ನದಾಫ್, ಪಾಂಡುರಂಗರಾವ್, ಎಚ್.ಐ. ಕಲ್ಲಣ್ಣವರ, ಎಂ.ಆರ್. ಧಾರವಾಡ, ಹನಮಂತ ದೊಡ್ಡಮನಿ, ಸೋಮು ರಾಮಗೇರಿ, ಬಸವರಾಜ ಮುಳಗುಂದ, ಸುದರ್ಶನ ಚೌಕಾ, ಜಾಫರ್ ಬಚ್ಚೇರಿ, ಆನಂದಸಿಂಗ್ ದೊಡ್ಡಮನಿ, ಗುರು ಬೂದಿಹಾಳ, ಸಂಜು ಕೊರಡೂರ ಪಾಲ್ಗೊಂಡಿದ್ದರು.

ಇಂತಹ ಕಳ್ಳತನದ ಪ್ರಕರಣಗಳನ್ನು ತಡೆಗಟ್ಟಲು ಸಾರ್ವಜನಿಕರು ತಮ್ಮ ಮನೆ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ ಎಂದು ಎಸ್‌ಪಿ ರೋಹನ್ ಜಗದೀಶ್ ಸಾರ್ವಜನಿಕರಲ್ಲಿ ಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here