ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗೆ ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ನಡೆದಿದೆ. ಬಗರ್ ಅಲಿ ಅಮ್ಜದ್ ಅಲಿ ಇರಾನಿ(28) ಎಂಬ ಆರೋಪಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸಿಪಿಐ ಧೀರಜ್ ಸಿಂಧೆಯಿಂದ ಗುಂಡಿನ ದಾಳಿ ನಡೆದಿದೆ.ಆರೋಪಿ ಬಗರ್ ಅಲಿ ಮೊಣಕಾಲಿಗೆ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಡಾವಣೆ ಪೊಲೀಸ್ ಠಾಣೆ ಪೊಲೀಸರಾದ ಹನಮಂತ ಓಲೇಕಾರ, ಅಶೋಕ್ ಗಡದ ಮೇಲೆ ಆರೋಪಿ ಹಲ್ಲೆ ಮಾಡಿದ್ದು, ಈ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು, ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದು, ಪೊಲೀಸರ ಹಲ್ಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಆರೋಪಿಯು, ಗದಗ ನಗರದ ಹೆಲ್ತ್ ಕ್ಯಾಂಪ್ ಬಳಿ ಕಳ್ಳತನದ ಆರೋಪದ ಮೇಲೆ ಗಂಗಾವತಿ ಪೊಲೀಸರು ಕರೆದೊಯ್ಯುವಾಗ ಜೂನ್ 28 ರಂದು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದನು.
ಹಲ್ಲೆ ಬಳಿಕ ಸ್ಕೂಟಿಯಲ್ಲಿ ಹೊಳೆಆಲೂರ ಗ್ರಾಮಕ್ಕೆ ಆರೋಪಿ ಹೋಗಿದ್ದನು. ನಂತರ ಹೊಳೆಆಲೂರನಿಂದ ಟ್ರೈನ್ ಮೂಲಕ ಮಹಾರಾಷ್ಟ್ರಕ್ಕೆ ಹೋಗಿದ್ದ. ಇಂದು ಬಡಾವಣೆ ಪೊಲೀಸರು ಹೊಳೆಆಲೂರಗೆ ಪಂಚನಾಮೆ ಹೋಗಿ ವಾಪಸ್ ಬರುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋಗುವಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.