ಬೆಂಗಳೂರು:- ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ DCM ಡಿಕೆ ಶಿವಕುಮಾರ್ ಸೇರಿ ಇತರರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆರ್ ಅಶೋಕ್ ದೂರು ನೀಡಿದ್ದಾರೆ.
ಬಸ್ ದರ ಏರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ನನ್ನ ಮತ್ತು ಪೊಲೀಸರ ಮಧ್ಯೆ ನಡೆದಿದ್ದ ವಾಗ್ವಾದದ ವಿಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರ ವಿರುದ್ಧ ದೂರು ನೀಡಲಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಆರ್. ಅಶೋಕ್ ಅವರು, ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ಮೇಲೆ FIR ದಾಖಲಿಸಿವಂತೆ ಮನವಿ ಮಾಡಿದ್ದಾರೆ. ಮಾರ್ಫಿಂಗ್ ಮಾಡಿರುವ ವಿಡಿಯೋ ಪೋಸ್ಟ್ ಮಾಡಿ ಮಾನಹಾನಿ ಮಾಡಿದ್ದಾರೆ. ನಾನು ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದಿಸಿಲ್ಲ. ಅಸಲಿ ವಿಡಿಯೋ ಹಾಗೂ ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೋ ಲಿಂಕ್ ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜವಾಬ್ದಾರಿ ಇರುವ 6 ಜನರ ಮೇಲೆ FIR ದಾಖಲಿಸುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಡಿಕೆಶಿವಕುಮಾರ್, ಐಶ್ವರ್ಯ ಮಹಾದೇವ್, ರಮೇಶ್ ಬಾಬು, ಇ ಸತ್ಯಪ್ರಕಾಶ್, ವಿಜಯ್ ಮತ್ತಿಕಟ್ಟಿ , ನಿಕೇತ್ ರಾಜ್ ಮೌರ್ಯ ಮೇಲೆ FIR ದಾಖಲಿಸುವಂತೆ ಆರ್ ಅಶೋಕ್ ಮನವಿ ಮಾಡಿದ್ದಾರೆ.



