ಬೆಳಗಾವಿ: ಇದು ಎಂಬಿಎ ಪದವೀಧರನ ಹೈಟೆಕ್ ವಂಚನೆಗೆ ಸಂಬಂಧಿಸಿದ ಸ್ಟೋರಿಯಾಗಿದೆ. ವೈದ್ಯಕೀಯ ಸೀಟ್ ಕೊಡಿಸ್ತಿನಿ ಎಂದು ಪಂಗನಾಮ ಹಾಕಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೈದರಾಬಾದ್ ಮೂಲದ ಅರವಿಂದ್ ಅರಗೊಂಡ ಬಂಧಿತ ವ್ಯಕ್ತಿ. ಎಂಬಿಎ ಪದವೀಧರನ್ನಾಗಿದ್ದು ಜನರಿಗೆ ವಂಚನೆ ಮಾಡುವುದನ್ನ ವೃತ್ತಿ ಮಾಡಿಕೊಂಡಿದ್ದ.
ನಗರದಲ್ಲೇ 10 ಜನರಿಗೆ ಮೋಸ ಮಾಡಿದ್ದು 1 ಕೋಟಿ 8 ಲಕ್ಷ ರೂ. ವಂಚಿಸಿದ್ದಾನೆ. ಬೆಳಗಾವಿ ಮೂಲದ ಓರ್ವ ವಿದ್ಯಾರ್ಥಿ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಖೆಡ್ಡಾಗೆ ಬೀಳಿಸಲಾಗಿದೆ. ಬಂಧಿತ ಆರೋಪಿಯಿಂದ 12 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 12 ಕಂಪ್ಯೂಟರ್, ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.



