ವಿಜಯನಗರ: ಸರ್ಕಾರಿ ಬಸ್ ಕದ್ದು ಪರಾರಿಯಾಗಿದ್ದ ಭೂಪನನ್ನ ಮರಿಯಮ್ಮಮಹಳ್ಳಿ ಪೊಲೀಸರು ಬಂದಿಸಿದ್ದಾರೆ.
Advertisement
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ನ್ನು ನಿಲ್ಲಿಸಲಾಗಿತ್ತು.
ಡ್ರೈವರ್ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ ಕೊಠಡಿಯಲ್ಲಿ ಮಲಗಿದ್ದರು. ಇದನ್ನು ಗಮನಿಸಿದ ಖದೀಮ ಬಸ್ ನ್ನ ಕದ್ದು ಪರಾರಿಯಾಗಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಕಾಟ ನಡೆಸಿದ್ದರು.
ಹಾರುವನಹಳ್ಳಿ ಗ್ರಾಮದ ಬಳಿ ಡಾಭಾದ ಹತ್ತಿರ ಬಸ್ ನಿಲ್ಲಿಸಿ ಪರಾರಿಯಾಗಿದ್ದ ಹೆಚ್.ಕೆಂಚಪ್ಪನನ್ನು (37) ಪೊಲೀಸರು ಬಂಧಿಸಿದ್ದಾರೆ. ಈತ ಮಗಿಮಾವಿನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.