ಕೇಂದ್ರದ ಅಚ್ಛೇ ದಿನ್ ಬರಲೇ ಇಲ್ಲ : ಫಕ್ಕೀರೇಶ ಮ್ಯಾಟಣ್ಣನವರ

0
congress
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಯುವಕರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದ್ದು, ಯುವಕರಿಗೆ ಸೇರಿದಂತೆ ದೇಶದ ಜನತೆ ಕಾಯ್ದು ಕುಳಿತಿರುವ ಅಚ್ಛೇದಿನ್ ಬರಲೇ ಇಲ್ಲ ಎಂದು ರಾಜೀವ ಗಾಂಧಿ ಪಂಚಾಯತ ರಾಜ್ ಸಂಘಟನೆಯ ತಾಲೂಕಾಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣನವರ ಹೇಳಿದರು.

Advertisement

ಅವರು ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಆನಂದಸ್ವಾಮಿ ಗಡ್ಡದ್ದೇವರಮಠ ಅವರ ಪರ ಮನೆ ಮನೆಗೆ ತೆರಳಿ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಮೇಲೆ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಿ, ಬಡವರು, ಮಹಿಳೆಯರು, ಯುವಕರಿಗೆ ಅನುಕೂಲ ಮಾಡಿಕೊಟ್ಟಿದ್ದು, ಬಿಟ್ಟಿ ಭಾಗ್ಯ ಎನ್ನುವವರಿಗೆ ತಕ್ಕ ಪಾಠ ಕಲಿಸಬೇಕು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಆರಿಸಿ ತರಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಪ್ಪ ಸೂರಣಗಿ, ಬಸವರಡ್ಡಿ ಹನಮರಡ್ಡಿ, ಮಾರುತಿ ಕೊಳಲ, ಮಾರ್ತಾಂಡಪ್ಪ ಪೆದ್ದರ, ಸಿದ್ಧಲಿಂಗಯ್ಯ ಪಶುಪತಿಮಠ, ಜುಂಜಪ್ಪ ಮುದಿಯಮ್ಮನವರ, ಮಂಜಯ್ಯ ಶೀತಮ್ಮನವರ, ಬಸಣ್ಣ ಗೂಳಣ್ಣವರ, ಫಕ್ಕೀರಯ್ಯ ಹಿರೇಮಠ, ಕರಿಯಪ್ಪ ಸಾಂದ್ಲಿ, ಪರಸಣ್ಣ ಒಂಟಿ, ಹಜರೇಸಾಬ ಮಾಚೇನಹಳ್ಳಿ, ಹನಮಂತಪ್ಪ ಸವಣೂರ, ಗುಡದಯ್ಯ ದೇವರಮನಿ, ಬಸಣ್ಣ ಅರಳಿ, ದೇವಪ್ಪ ಭಜಂತ್ರಿ, ಜಯಕ್ಕ ಕಳ್ಳಿ, ನರೇಂದ್ರಪ್ಪ ಜಾಲವಾಡಗಿ ಸೇರಿದದಂತೆ ಮುಖಂಡರು, ನೂರಾರು ಕಾರ್ಯಕರ್ತರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here