ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು 2025ರ ಜನವರಿ ತಿಂಗಳಿನಲ್ಲಿ ನಡೆಸಿದ ಬೆರಳಚ್ಚು ಪರೀಕ್ಷೆಯಲ್ಲಿ ಇಲ್ಲಿನ ರಾಜ್ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ಪರೀಕ್ಷೆಯಲ್ಲಿ ಶೇ. 96 ಮತ್ತು ಗಣಕಯಂತ್ರ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಸಾಧಿಸಿದೆ.
ಬೆರಳಚ್ಚು ಪರೀಕ್ಷೆಯಲ್ಲಿ 13 ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ 7 ಮತ್ತು ದ್ವಿತೀಯ ದರ್ಜೆಯಲ್ಲಿ 4 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಆಂಗ್ಲ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಪ್ರಥಮ ಸ್ಥಾನ ಗಜೇಂದ್ರಗೌಡ ಎಮ್.ಪಾಟೀಲ ಹಾಗೂ ಪ್ರಶಾಂತ ವಿ. ಚಿಂಚಲಿ (ಶೇ.90.5), ದ್ವಿತೀಯ ಭುವನೇಶ್ವರಿ ಎಮ್.ಯಾಡ್ರವಿ (ಶೇ.87), ತೃತೀಯ ನಿಕಿತಾ ಚಿಗಡೊಳ್ಳಿ (ಶೇ.86) ಪಡೆದಿದ್ದಾರೆ.
ಕನ್ನಡ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ಪ್ರಥಮ ಸ್ಥಾನ ಶಿಲ್ಪಾ ದಾಸರ (ಶೇ.89), ದ್ವಿತೀಯ ಸ್ಥಾನ ಗಜೇಂದ್ರಗೌಡ ಎಮ್.ಪಾಟೀಲ (ಶೇ.88), ತೃತೀಯ ಸ್ಥಾನ ನಿರಂಜನ ಎಸ್.ಕಿಚಡಿ (ಶೇ.87) ಪಡೆದುಕೊಂಡಡಿದ್ದಾರೆ.
ಕನ್ನಡ ಬೆರಳಚ್ಚು ಪ್ರೌಢದರ್ಜೆಯಲ್ಲಿ ಪ್ರಥಮ ಸ್ಥಾನ ಸಹನಾ ಪಾಟೀಲ (ಶೇ.88.5), ದ್ವಿತೀಯ ಸ್ಥಾನ ಸುನಿತಾ ಟಿ.ಹಾವನೂರ (ಶೇ.85.5), ತೃತೀಯ ಸ್ಥಾನ ಲಲಿತಾ ಎಸ್.ಕೋರಿ (ಶೇ.85) ಪಡೆದರೆ, ಆಂಗ್ಲ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಪ್ರಥಮ ಸ್ಥಾನ ಸುನಿತಾ ಟಿ.ಹಾವನೂರ (ಶೇ.89.5), ದ್ವಿತೀಯ ಸ್ಥಾನ ಸಹನಾ ಪಾಟೀಲ (ಶೇ.76) ಪಡೆದುಕೊಂಡಿದ್ದಾರೆ.
ಗಣಕಯAತ್ರ ಪರೀಕ್ಷೆಯ ಪ್ರಥಮ ಸ್ಥಾನ ನಿಶಾಂತ ಅಂಜುಮ ಪಠಾಣ (ಶೇ.81.5), ದ್ವಿತೀಯ ಸ್ಥಾನ ಶ್ರೀಲಕ್ಷ್ಮೀ ಎನ್.ಮಾನವಿ (ಶೇ.79.5), ತೃತೀಯ ಸ್ಥಾನ ಪ್ರಶಾಂತ ಎಮ್.ಗಾಣಗೇರ, ಅನುರೂಪಾ ಎಚ್. ಚಲವಾದಿ (ಶೇ.73) ಪಡೆದಿರುತ್ತಾರೆ.
ಎಲ್ಲ ಸಾಧಕ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಸತ್ಯಶೀಲಾ ಕೆ.ಬಡಿಗೇರ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.



