ವಿಜಯಸಾಕ್ಷಿ ಸುದ್ದಿ, ಗದಗ
Advertisement
ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷ ಹಾಗೂ ಗದಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕು ಅಧಿಕಾರಿಗಳಾಗಿರುವ ಡಾ. ಬಸವರಾಜ ಬಳ್ಳಾರಿ ಅವರ ಪುತ್ರಿ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರು 2023-24ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 571 ಪಡೆಯುವ ಮೂಲಕ ಶೇ. 95.16ರಷ್ಟು ಅಂಕಗಳನ್ನು ಗಳಿಸಿ, ಕೊಪ್ಪಳ ಜಿಲ್ಲೆಯ ಚೇತನಾ ಪಿಯು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಇಂಗ್ಲಿಷ್-96, ಹಿಂದಿ-91, ಫಿಸಿಕ್ಸ್-95, ಕೆಮೆಸ್ಟಿ-95, ಮ್ಯಾಥಮೆಟಿಕ್ಸ್-94, ಬಯಾಲಜಿ-100ರಷ್ಟು ಅಂಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಸಾಧನೆ ಮೆರೆದ ಸ್ಪೂರ್ತಿ ಬಸವರಾಜ ಬಳ್ಳಾರಿ ಅವರಿಗೆ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ, ಸಂಘದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.