ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾಮಿ ವಿವೇಕಾನಂದರ 162ನೇ ಜನ್ಮದಿನೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಬೆಂಗಳೂರು ಇವರು ಗೋಕಾಕದ ಸತೀಶ ಜಾರಕಿಹೊಳಿ ಫೌಂಡೇಶನ್ ಹಾಗೂ ಶ್ರೀ ವಿವೇಕಾನಂದ ಯೋಗ ಮತ್ತು ಸಂಸ್ಕೃತಿ ವಿಕಾಸ ಸಂಘ ಇವರುಗಳ ಸಹಯೋಗದಲ್ಲಿ ಇತ್ತೀಚೆಗೆ ಎಚ್.ಕೆ.ಜಿ.ಎನ್. ಹಾಲ್ ಗೋಕಾಕದಲ್ಲಿ ನಡೆಸಿದ 3ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಲೀಗ್ ಸ್ಪರ್ಧೆಗಳಲ್ಲಿ ಶ್ರೀಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗಪಾಠಶಾಲೆ ಗದಗ ಸಂಸ್ಥೆಯ ತಂಡದಿಂದ ಭಾಗವಹಿಸಿದ ಸ್ಪರ್ಧಾಳುಗಳು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
8-10 ವರ್ಷದ ಬಾಲಕರ ವಿಭಾಗದಲ್ಲಿ ನವೀನ ಪಲ್ಲದ ತೃತೀಯ ಸ್ಥಾನ, 12-14 ವರ್ಷದ ಬಾಲಕರ ವಿಭಾಗದಲ್ಲಿ ಪ್ರಣವಗೌಡ ಪಾಟೀಲ ಪ್ರಾತಿನಿಧ್ಯ (ಸಮಾಧಾನಕರ) ಸ್ಥಾನ, 21-25 ವರ್ಷದ ಮಹಿಳೆಯರ ವಿಭಾಗದಲ್ಲಿ ಸಂಜನಾ ಸಜ್ಜನರ ಪ್ರಥಮ ಸ್ಥಾನ, 50-60 ವರ್ಷದ ಮಹಿಳೆಯರ ವಿಭಾಗದಲ್ಲಿ ಜಯಶ್ರೀ ಡಾವಣಗೇರಿ ದ್ವಿತೀಯ ಸ್ಥಾನ, 60 ವರ್ಷದ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಕೆ.ಎಸ್. ಪಲ್ಲದ ಪ್ರಥಮ ಸ್ಥಾನ ಗಳಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಯೋಗ ಶಿಕ್ಷಕಿ ಸುನಂದಾ ಜ್ಯಾನೋಪಂತರ, ಸುಧಾ ಪಾಟೀಲ ರೆಫ್ರಿ ಕಾರ್ಯ ನಿರ್ವಹಿಸಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ಯೋಗ ಪಾಠಶಾಲೆ ತಂಡದ ಸದಸ್ಯರಿಗೆ, ವಿಜೇತರಾದ ಸ್ಪರ್ಧಿಗಳಿಗೆ, ತರಬೇತುದಾರ ಬೀಸಪ್ಪ ಬಿ. ಮತ್ತು ಯಶಸ್ಸಿಗೆ ಸಹಕರಿಸಿದ ಮಹನೀಯರೆಲ್ಲರಿಗೂ ಯೋಗ ಪಾಠಶಾಲೆಯ ಮುಖ್ಯಸ್ಥರಾದ ಎಂ.ಎಸ್. ಅಂಗಡಿ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ, ನಿರ್ದೇಶಕ ಯೋಗಾಚಾರ್ಯ ಕೆ.ಎಸ್. ಪಲ್ಲದ ಹಿತೈಷಿಗಳಾದ ಎಂ.ಎಸ್. ಶಿರಿಯಣ್ಣವರ, ಡಾ. ಎಂ.ವಿ. ಐಹೊಳ್ಳಿ, ವಿ.ಎಚ್. ಪಾಟೀಲ, ವಿ.ಎಂ. ಮುಂದಿನಮನಿ, ಎಸ್.ಬಿ. ಗೌಡರ, ಅನ್ನಪೂರ್ಣ ವರವಿ, ವಿಜಯಲಕ್ಷ್ಮೀ ಆನೆಹೊಸೂರ ಅಭಿನಂದಿಸಿದ್ದಾರೆ.