ವಿಜಯಸಾಕ್ಷಿ ಸುದ್ದಿ, ಗದಗ : 2024–25ನೇ ಸಾಲಿನ ನಗರದ ಸನ್ಮಾರ್ಗ ಪದವಿಪೂರ್ವ ವಿದ್ಯಾಲಯ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಗದಗ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 2024–25ನೇ ಸಾಲಿನ ತಾಲೂಕಾ ಮಟ್ಟದ ‘ಬಿ’ ಗ್ರೂಪ್ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸನ್ಮಾರ್ಗ ಪದವಿಪೂರ್ವ ಕಾಲೇಜು ಸಾಧನೆಗೈದಿದೆ.
ವೈಯಕ್ತಿಕ ವಿಭಾಗದ ಬಾಲಕಿಯರ 1500 ಮಿ ಓಟದಲ್ಲಿ ಮನುಶ್ರೀ ಕುರ್ತಕೋಟಿ ಪ್ರಥಮ ಸ್ಥಾನ, ಬಾಲಕಿಯರ ಚಕ್ರ ಎಸೆತದಲ್ಲಿ ಶಿವಾನಿ ಕವತೆಕರ್ ದ್ವಿತೀಯ ಸ್ಥಾನ, ಭಲ್ಲೆ ಎಸೆತದಲ್ಲಿ ತೃತೀಯ ಸ್ಥಾನ, ರಿಂಕು ಚೌಧರಿ, 400 ಮಿ ಓಟದಲ್ಲಿ ತೃತೀಯ ಸ್ಥಾನ, ವೀಣಾ ಡೊಲ, 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, ಹಾಗೂ 200 ಮಿ ಓಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ವಿಭಾಗದ ಬಾಲಕಿಯರ ಬಾಸ್ಕೆಟ್‌ಬಾಲ್-ಪ್ರಥಮ, ಟೇಬಲ್ ಟೆನ್ನಿಸ್-ದ್ವಿತೀಯ, ಬಾಲಕರ ಪುಟ್‌ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಬಾಸ್ಕೆಟ್‌ಬಾಲ್ ದ್ವಿತೀಯ, ಟೇಬಲ್ ಟೆನ್ನಿಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೈದ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಚೇರಮನ್ ಪ್ರೊ. ರಾಜೇಶ್ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ಸಯೈದ್ ಮತೀನ್ ಮುಲ್ಲಾ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.