ವಿಜಯಸಾಕ್ಷಿ ಸುದ್ದಿ, ಗದಗ: ಅದರಗುಂಚಿಯಲ್ಲಿ ನಡೆದ 2ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ಅಮರೇಶ್ವರ ನಗರದಲ್ಲಿರುವ ರಾಯಲ್ ಯೂಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ಕರಾಟೆ ವಿದ್ಯಾರ್ಥಿಗಳಾದ ಮಹಮ್ಮದಹಾಜಿದ ಕಾಗದಗಾರ ಪ್ರಥಮ, ಮಹಮ್ಮದರುಬೈಯ ಕೋನಸಾಗರ ದ್ವಿತೀಯ, ತನ್ವೀರ ಕದಡಿ ದ್ವೀತಿಯ ಸ್ಥಾನ ಪಡೆದುಕೊಂಡು ಗದಗ ನಗರಕ್ಕೆ ಹಾಗೂ ಅಸೋಸಿಯೇಶನ್‌ಗೆ ಕೀರ್ತಿ ತಂದಿದ್ದಕ್ಕಾಗಿ ಈ ಮೂವರು ವಿದ್ಯಾರ್ಥಿಗಳಿಗೆ ಮುಖ್ಯ ತರಬೇತುದಾರರ ಮೆಹಬೂಬ ದೊಡ್ಡಮನಿ, ಮೇಘರಾಜ ವಾಲ್ಮೀಕಿ, ಎಲ್ಲ ಪಾಲಕರು ಹಾಗೂ ಅಸೋಸಿಯೇಶನ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.



