ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಶ್ರೀ ಜಗದ್ಗುರು ಫಕಿರೇಶ್ವರ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗದಗ ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 2025-26ನೇ ಸಾಲಿನ ಗದಗ ಜಿಲ್ಲಾ ವಲಯದ ಯುವಜನೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಮೆಹೆಂದಿ, ಒನ್ ಆಕ್ಟ್ ಪ್ಲೇಗಳಲ್ಲಿ ಪ್ರಥಮ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಶಾಂತಗೌಡ ಪಾಟೀಲ, ನಾಗರಾಜ ಜಕ್ಕಲಿ, ಮಂಜಪ್ಪ ಮಳ್ಳಣ್ಣವರ, ಚರ್ಚಾ ಸ್ಪರ್ಧೆಯಲ್ಲಿ ಅರುಂಧತಿ ಛಬ್ಬಿ, ಪ್ರಿಯ ನಾಗುರ, ಮೆಹೆಂದಿ ಸ್ಪರ್ಧೆಯಲ್ಲಿ ಫರಹಾತ್ ಮಕಾದಾರ, ಒನ್ ಆಕ್ಟ್ ಪ್ಲೇನಲ್ಲಿ ಶಿವರಾಜ ಕಾಶಣ್ಣವರ ಮತ್ತು ತಂಡದವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ಭಾಷಣ ಸ್ಪರ್ಧೆಯಲ್ಲಿ ಮೆಹಬೂಬಿ ಬಾಬಕ್ಕನವರ ದ್ವಿತೀಯ ಸ್ಥಾನವನ್ನು ಗಳಿಸಿದ್ದಾಳೆ. ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಉಮೇಶ್ ಅರಹುಣಸಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.



