ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರು ಆಗಸ್ಟ್-2025ರಲ್ಲಿ ನಡೆಸಿದ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಸ್ (2024-25) ಕೋರ್ಸ್ನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಬಸವ ಯೋಗ ಮಹಾವಿದ್ಯಾಲಯದ ಒಟ್ಟು 30 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 29 ವಿದ್ಯಾರ್ಥಿಗಳು ವಿಶೇಷ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರಲ್ಲಿ ಐಶ್ವರ್ಯ ಎನ್. ಮುದ್ದಿಕೋಲ – ಶೇ. 88, ರೋಹನ್ ಪಿ. ಮಳ್ಳೊಳ್ಳಿ – ಶೇ. 87.8, ಯಲ್ಲಪ್ಪ ಎಸ್. ಕನಾಜ – ಶೇ. 87.2 ಅಂಕಗಳನ್ನು ಪಡೆದು ಬಸವ ಯೋಗ ಮಹಾವಿದ್ಯಾಲಯದ ಘನತೆಯನ್ನು ಹೆಚ್ಚಿಸಿದ್ದಾರೆ.
ಯೋಗ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತು ಹೆಚ್ಚಿನ ಅಂಕ ಗಳಿಸಿ ಮಹಾವಿದ್ಯಾಲಯದ ಘನತೆ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಮತ್ತು ಪ್ರೋತ್ಸಾಹಿಸಿದ ಸಿಬ್ಬಂದಿ ವರ್ಗಕ್ಕೆ ಬಸವ ಯೋಗ ಮಹಾವಿದ್ಯಾಲಯದ ಅಧ್ಯಕ್ಷರಾದ ಪೂಜ್ಯಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಚೇರ್ಮನ್ ಪ್ರೊ. ಎಸ್.ವಿ. ಸಂಕನೂರ, ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಐ.ಬಿ. ಕೊಟ್ಟೂರಶೆಟ್ಟಿ, ಪ್ರಾಚಾರ್ಯರು, ಆರ್.ಜಿ.ಎಸ್.ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ರೋಣ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಡಾ. ಎಂ. ವಿ. ಐಹೊಳ್ಳಿ ಮುಂತಾದವರು ಅಭಿನಂದಿಸಿದ್ದಾರೆ.



