ರಾಜ್ಯ ತಂಡವನ್ನು ಪ್ರತಿನಿಧಿಸುವ ಅರ್ಹತೆ

0
Achievement of Gadag District in State Yogasana Sports Championship Competitions
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ ಬೆಂಗಳೂರು ಇವರು ಚಿಕ್ಕಮಗಳೂರು ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ, ಲಯನ್ಸ್ ಕ್ಲಬ್, ಚಕ್ರವರ್ತಿ ಪಿ.ಯು. ಕಾಲೇಜ ಕಡೂರು ಇವರ ಸಹಯೋಗದಲ್ಲಿ ಇತ್ತೀಚಿಗೆ ಕಡೂರಿನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್-2024 ಸ್ಪರ್ಧೆಗಳಲ್ಲಿ ಗದಗ ಜಿಲ್ಲೆಯ ಒಟ್ಟು 48 ಜನ ಯೋಗಾಸನ ಕ್ರೀಡಾಪಟುಗಳು ಭಾಗವಹಿಸಿ ಅವರಲ್ಲಿ 16 ಜನ ವಿವಿಧ ವಯೋಮಿತಿ ವಿಭಾಗಗಳಲ್ಲಿ ಸ್ಥಾನ ಗಳಿಸಿದ್ದಾರೆ.

Advertisement

8-10 ವರ್ಷದ ಬಾಲಕರ ವಿಭಾಗದಲ್ಲಿ ಪ್ರೀತಮ್ ಬಾರಕೇರ ತೃತೀಯ, 30-35 ವರ್ಷದ ಮಹಿಳೆಯರ ವಿಭಾಗದಲ್ಲಿ ಅಂಬಿಕಾ ಶಿದ್ಲಿಂಗ್ ತೃತೀಯ, 35-45 ವರ್ಷದ ಪುರುಷರ ವಿಭಾಗದಲ್ಲಿ ಯಶವಂತ ಮತ್ತೂರ ಪ್ರಥಮ, 50-60 ವರ್ಷದ ಮಹಿಳೆಯರ ವಿಭಾಗದಲ್ಲಿ ಜಯಶ್ರೀ ಡಾವಣಗೇರಿ ದ್ವಿತೀಯ, ಅರುಣಾ ಇಂಗಳಳ್ಳಿ ತೃತೀಯ, ವೃತ್ತಿಪರ (ನಿರ್ಣಾಯಕ)ರಿಗಾಗಿ ನಡೆಸಿದ 21-30 ವರ್ಷದ ಪುರುಷರ ವಿಭಾಗದಲ್ಲಿ ಸಂತೋಷ ಕರಿಗೌಡ್ರ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪ್ರೀತಿ ಹಡಗಲಿ ದ್ವಿತೀಯ, 30 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಯೋಗಾಚಾರ್ಯ ಕೆ.ಎಸ್. ಪಲ್ಲೇದ ತೃತೀಯ ಸ್ಥಾನ ಗಳಿಸಿ ಮುಂಬರುವ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಭಾಗವಹಿಸಿದವರಿಗೆ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆ ಚೇರಮನ್ ಜಿ.ಗಂಗಾಧರಪ್ಪ, ಅಧ್ಯಕ್ಷ ಜಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ. ಪ್ರಭು ಮತ್ತು ಸ್ಪರ್ಧೆಯ ಯಶಸ್ಸಿಗೆ ಶ್ರಮವಹಿಸಿದ ಬಿ.ಎಂ. ಗಿರೀಶ, ಎ. ನಟರಾಜ, ಸಹಕರಿಸಿದ ಮಹನೀಯರೆಲ್ಲರಿಗೂ ಗದಗ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಗದಗ ಜಿಲ್ಲಾ ಅಮೆಚೂರ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಪಲ್ಲೇದ ಹೃತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.

ಜ್ಯೋತಿ ಹೊಸಮನಿ, ಸಂಗೀತಾ ಇಟಗಿ, ಪೂರ್ಣಿಮಾ ಕಟಿಗ್ಗಾರ, ಆಕಾಶ ಜಂಗಿನ, ಬಸವರಾಜ ಮೂಲಿಮನಿ, ಸಂಜನಾ ಸಜ್ಜನರ, ನಿಖಿತಾ ಹದ್ಲಿ, ಸುಧಾ ಪಾಟೀಲ ರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸುವ ಕಾಯ್ದಿರಿಸಿದ ಕ್ರೀಡಾಪಟುಗಳಾಗಿದ್ದಾರೆ. ಚೇತನ ಚುಂಚಾ, ಎಸ್.ಎಚ್. ಹಿರೇಮಠ, ಸುಮಂಗಲಾ ಹದ್ಲಿ, ಕೆ.ಎಸ್. ಪಲ್ಲೇದ, ಸುಧಾ ಪಾಟೀಲ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

 


Spread the love

LEAVE A REPLY

Please enter your comment!
Please enter your name here