ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿರುವ ಕೆಎಲ್‌ಇ ಸೊಸೈಟಿಯ ಬಿಸಿಎ ವಿಭಾಗದವರು ಆಯೋಜಿಸಿದ ಪಿಯೆಸ್ತಾ ಸ್ಯೆಂಥವೇವ್ಸ್ ಫೆಸ್ಟ್ನಲ್ಲಿ ಮನೋರಮಾ ಕಾಲೇಜಿನ ವಿದ್ಯಾರ್ಥಿಗಳಾದ ಸೃಷ್ಟಿ ಬಿನ್ನಾಳ, ವೀಣಾ ಚುಡಗುಂದ ಕೀರ್ತಿ ಹೊಸಮಠ, ಶ್ರಾವಣಿ ಕುಲಕರ್ಣಿ ಭಾಗವಹಿಸಿ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
Advertisement
ವರ್ಚುವಲ್ ವೆಂಚರ್ ಶ್ರಾವಣಿ ಕುಲಕರ್ಣಿ, ಶ್ರೀನಿಧಿ, ಕೃಷ್ಣಾ ಹಾಗೂ ಹರೀಶ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿಗಳಾದ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಹ ಸಂಯೋಜಕರಾದ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.