ವಿಜಯಸಾಕ್ಷಿ ಸುದ್ದಿ, ಗದಗ : ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ ವತಿಯಿಂದ `ಚಿಣ್ಣರ ಚಿತ್ರ ಚಿತ್ತಾರ’ ರಾಜ್ಯಮಟ್ಟದ ಮಕ್ಕಳ ಚಿತ್ರ ಕಲೋತ್ಸವ-2023-24ನೇ ಸಾಲಿನ ಸ್ಪರ್ಧೆಯಲ್ಲಿ ಗದಗ-ಬೆಟಗೇರಿ ಎಸ್‌ಎಸ್‌ಕೆ ಶ್ರೀ ಜಗದಂಬಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ 40 ವಿದ್ಯಾರ್ಥಿಗಳು ಭಾಗವಹಿಸಿ, ಸ್ಮರಣಕೆ ಹಾಗೂ ಪ್ರಶಸ್ತಿಪತ್ರ ಪಡೆದರು.
ವಿದ್ಯಾರ್ಥಿನಿ ಸಮೃದ್ಧಿ ಅರಸಿದ್ದಿ ವಿಶೇಷ ಸ್ಮರಣಕೆ ಪ್ರಶಸ್ತಿಗೆ ಆಯ್ಕೆಯಾಗಿ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.
ಚಿತ್ರಕಲೆ ತರಬೇತಿ ನೀಡಿದ ಡಾ. ಜಾಕೀರಹುಸೇನ್ ಎಮ್.ಕೊರ್ಲಹಳ್ಳಿ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲೋಕನಾಥ್ ಬಿ.ಕಬಾಡಿ, ಜಿ.ವಿ. ಬಸವಾ, ವಾಯ್ಸ್ ಚೇರಮನ್ ದತ್ತು ಯು.ಪವಾರ್, ಕಮಿಟಿಯ ಸರ್ವ ಸದಸ್ಯರು, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಡಿ. ಬೆನಕಲ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಸ್. ಹವಳದ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.