ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕೋಟುಮಚಗಿ ಸರಕಾರಿ ಪ್ರೌಢಶಾಲೆಯ 2025ರ ಎಸ್.ಎಸ್.ಎಲ್.ಸಿ ಫಲಿತಾಂಶ ಅತ್ಯುತ್ತಮವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 56 ವಿದ್ಯಾರ್ಥಿಗಳಲ್ಲಿ 41 ವಿದ್ಯಾರ್ಥಿಗಳು ಉತ್ತಿರ್ಣಗಿದ್ದಾರೆ.
Advertisement
ಶಾಲೆಯ ಫಲಿತಾಂಶ ಶೇ. 73.2 ಆಗಿದ್ದು, ವಿಜಯಲಕ್ಷ್ಮೀ ಶಂಕ್ರಪ್ಪ ಶಿಂಗ್ಟಾಲಕೇರಿ ಶೇ. ಸದರಿ 89(ಪ್ರಥಮ), ಐಶ್ವರ್ಯ ನೀಲಪ್ಪ ಹುಡೇದ ಶೇ. 87 (ದ್ವಿತೀಯ), ಯಲ್ಲಮ್ಮ ಸಿದ್ದಪ್ಪ ಶಿಂಗ್ಟಾಲಕೇರಿ ಶೇ. 86.8 (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಸದರಿ ವಿದ್ಯಾರ್ಥಿಗಳಿಗೆ ಶಾಲೆಯ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ಬಳಗದವರು ಅಭಿನಂದಿಸಿದ್ದಾರೆ.