ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಹುಬ್ಬಳ್ಳಿಯ I.ಎಂ.ಒ.ಕೆ. ಮಹಾವಿದ್ಯಾಲಯದಲ್ಲಿ ಜರುಗಿದ ‘ಇಂಟರ್ ಕಾಲೇಜ್ ಫೆಸ್ಟ್ ವಿದ್ಯೋತ್ಸವ 2025’ರಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯರು ಸಕ್ರಿಯವಾಗಿ ಭಾಗವಹಿಸಿ, ‘ರಿಧಮ್ ಎಕ್ಸ್ಪ್ರೆಸ್’ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರಾದ ಅನಿತಾ ಚೌಧರಿ, ಶ್ರೇಯಾ ಶೆಟ್ಟಿ, ಝಿಕ್ರಾ ಸುಂಕದ, ಜವೇರಿಯಾ ಡಂಬಳ, ನೇಹಾ ಬರದ, ರಿಂಕು ಚೌಧರಿ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ. `QUIZ, ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ನೇಮಿಚಂದ ಗಜೇಂದ್ರಗಡ, ಸಾಹಿಲ್ ಜೈನ, ವರುಣ ಜರತ್ಖಾನಿ, ಚಿನ್ಮಯ ಅಕ್ಕಿ ಹಾಗೂ ಶ್ರೀನಿವಾಸ ತೆಗ್ಗಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಸ್ಟುಡೆಂಟ್ಸ್ ಎಜ್ಯುಕೇಷನ್ ಸೊಸೈಟಿಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಪ್ರೊ. ಸಂಗೀತಾ ಬೀಳಗಿ ಹಾಗೂ ಪ್ರೊ. ಎಸ್.ಎಸ್. ವಜ್ರಬಂಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.



