ರೈತರಿಗೆ ವಕ್ಫ್ ನಿಂದ ನೋಟಿಸ್ ಬಂದರೆ ಕ್ರಮ ಗ್ಯಾರಂಟಿ: HK ಪಾಟೀಲ್!

0
Spread the love

ಗದಗ:- ರೈತರಿಗೆ ವಕ್ಫ್ ನಿಂದ ನೋಟಿಸ್ ಬಂದರೆ ಕ್ರಮ ಗ್ಯಾರಂಟಿ ಎಂದು ಸಚಿವ HK ಪಾಟೀಲ್ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು,ರೈತರ ಆಸ್ತಿ ವಕ್ಫ್ ಪಾಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ಇದಕ್ಕೆ ಗದಗದಲ್ಲಿ ಆತಂಕ, ಟೀಕೆ ಟಿಪ್ಪಣಿಗೆ ಅವಕಾಶವಿಲ್ಲ. 689 ವಕ್ಫ್ ಆಸ್ತಿಗಳಿವೆ. ಯಾವುದೇ ರೈತರಿಗೆ ನೋಟಿಸ್ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ.

ನಮ್ಮ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಉಪಚುನಾವಣೆಗಾಗಿ ಮಾಡಿರುವ ಗೊಂದಲ, ಸೃಷ್ಟಿ ಹೊರತು ಬೇರೇನಲ್ಲ ಎಂದರು.

ರೈತರ ಆಸ್ತಿ ಖಾತಾ ಬದಲಾವಣೆ ವಕ್ಫ್ ಆಗಿರುವ ಬಗ್ಗೆ ನಮ್ಮ ರೈತರಿಗೆ ಆತಂಕದ ಪರಿಸ್ಥಿತಿ ಇಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು 2019 ರಿಂದ 2023ರ ಅವಧಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಭಂದಿಸಿದಂತೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here