ಅರಣ್ಯದೊಳಗೆ ಶವ ಹೂತಿರೋದು ಸಾಬೀತಾದ್ರೆ ಕ್ರಮ: ಈಶ್ವರ ಖಂಡ್ರೆ!

0
Spread the love

ಬೆಂಗಳೂರು:- ಅರಣ್ಯದೊಳಗೆ ಶವ ಹೂತಿರೋದು ಸಾಬೀತಾದ್ರೆ ಕ್ರಮ ಗ್ಯಾರಂಟಿ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಶವ ಹೂತಿರುವುದು ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು. ಮೀಸಲು ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಬೇಕಾದಲ್ಲಿ ನಿಯಮಾನುಸಾರ ಕ್ಲಿಯರೆನ್ಸ್ ಅನುಮತಿ ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಿಎಜಿ ವರದಿ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಕೇಂದ್ರದ ಮೋದಿ ಸರ್ಕಾರವನ್ನ ಕೇಳಲಿ. 200 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರದ ಬಿಜೆಪಿ ಸಾಲ ತೆಗೆದುಕೊಂಡಿದೆ. ಯಾಕೆ ಇಷ್ಟು ಹಣ ಸಾಲ ತೆಗೆದುಕೊಂಡಿದ್ದಾರೆ ಕೇಳಿ? ನಾವು 7 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದೇವೆ. ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಕಾಯ್ದೆ ಪ್ರಕಾರ ನಾವು ಮಿತಿ ಮೀರಿಲ್ಲ. ಗ್ಯಾರಂಟಿ ಯೋಜನೆ, ಬಡವರ ಬಲವರ್ಧನೆಗೆ ಉಪಯೋಗ ಮಾಡಿದ್ದೇವೆ. ಇಡೀ ದೇಶದಲ್ಲಿಯೇ ನಮ್ಮ ತಲಾ ಆದಾಯ, ಆರ್ಥಿಕತೆ ಹೋಲಿಸಿದ್ರೆ ಕರ್ನಾಟಕ ನಂ.1, ಇದರ ವರದಿ ಕೇಂದ್ರ ಸರ್ಕಾರ ಬಳಿಯೇ ಇದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ, ಜಗತ್ತಿಗೆ ಮಾದರಿಯಾಗಿವೆ. ನಾವು ಮಾಡಿದ ಗ್ಯಾರಂಟಿ ಯೋಜನೆಗಳನ್ನ ವಿಪಕ್ಷಗಳು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here