HomeEntertainmentಮಹಾಭಾರತ ಸಿನಿಮಾ ಘೋಷಿಸಿದ ನಟ ಆಮೀರ್ ಖಾನ್

ಮಹಾಭಾರತ ಸಿನಿಮಾ ಘೋಷಿಸಿದ ನಟ ಆಮೀರ್ ಖಾನ್

For Dai;y Updates Join Our whatsapp Group

Spread the love

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಸೋಲಿನ ಕಹಿ ಅನುಭವಿಸಿದ್ದ ಬಾಲಿವುಡ್‌ ಮಿಸ್ಟರ್‌ ಫರ್ಫೆಕ್ಷನಿಸ್ಟ್‌ ಆಮೀರ್‌ ಖಾನ್‌ ಕೊಂಚ ದಿನಗಳ ಕಾಲ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಆಮೀರ್‌ ಚಿತ್ರರಂಗದಲ್ಲಿ ಆಕ್ಟೀವ್‌ ಆಗಿದ್ದು ಇದೀಗ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಅಂದ ಹಾಗೆ ಆಮೀರ್‌ ಖಾನ್‌ ಗೆ ಮಹಾಭಾರತ ಸಿನಿಮಾ ಮಾಡುವ ಕನಸ್ಸಿದ್ದು ಆ ಕನಸನ್ನು ಇದೇ ವರ್ಷ ನನಸು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.‌ 

ಮಹಾಭಾರತದ ಸಿನಿಮಾ ಮಾಡುವ ಕುರಿತು ಮಾತನಾಡಿರುವ ಆಮೀರ್ ಖಾನ್, ‘ಮಹಾಭಾರತ’ ನನ್ನ ದೊಡ್ಡ ಕನಸುಗಳಲ್ಲಿ ಒಂದು. ಈ ವರ್ಷ ನಾನು ಇದರ ಕೆಲಸ ಆರಂಭಿಸುತ್ತೇನೆ. ಇದನ್ನು ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಮಾದರಿಯಲ್ಲಿ ಹಲವಾರು ಭಾಗಗಳಲ್ಲಿ ತರಲು ಪ್ಲ್ಯಾನ್ ಮಾಡಿದ್ದೇನೆ ಎಂದಿದ್ದಾರೆ.

ಇದರ ಬರವಣಿಗೆಗೆ ಕೊಂಚ ಸಮಯ ಬೇಕಿದೆ. ಆದರೆ ಇದರಲ್ಲಿ ನಾನು ನಟಿಸುತ್ತೇನೋ ಇಲ್ಲವೋ ಖಚಿತವಿಲ್ಲ. ಆದರೆ ಪ್ರತಿಯೊಂದು ಪಾತ್ರಕ್ಕೂ ಸೂಕ್ತ ನಟರನ್ನೇ ಆಯ್ಕೆ ಮಾಡುತ್ತೇನೆ ಎಂದು ಮಹಾಭಾರತ ಸಿನಿಮಾ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಅಂದಹಾಗೆ, ಕಡೆಯದಾಗಿ 2022ರಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮೀರ್ ನಟಿಸಿದ್ದರು. ಈಗ ‘ಸಿತಾರ್ ಜಮೀನ್ ಪರ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕಂಪ್ಲೀಟ್‌ ಆದ ಬಳಿಕ ಮಹಾಭಾರತ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!