ನಟ ಅಜಿತ್‌ ಗೆ ಮತ್ತೆ ಭೀಕರ ಅಪಘಾತ: ವಿಡಿಯೋ ನೋಡಿ ಶಾಕ್‌ ಆದ ಫ್ಯಾನ್ಸ್‌

0
Spread the love

ತಮಿಳು ನಟ ಅಜಿತ್ ಕುಮಾರ್ ಅವರಿಗೆ ಕಾರು ಮತ್ತು ಬೈಕ್‌ ರೇಸ್‌ಗಳೆಂದರೆ ಸಖತ್‌ ಕ್ರೇಜ್‌. ಹೀಗಾಗಿ ಎಲ್ಲೇ ರೇಸಿಂಗ್‌ ಇದ್ದರು ಅಜಿತ್‌ ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗೆ ರೇಸಿಂಗ್‌ ವೇಳೆ ಅಪಘಾತಕ್ಕೆ ಒಳಗಾಗಿದ್ದ ಅಜಿತ್‌ ಇದೀಗ ಮತ್ತೊಮ್ಮೆ ಕಾರು ರೇಸಿಂಗ್‌ ನಲ್ಲಿ ಅಪಘಾತಕ್ಕೀಡಾಗಿದ್ದಾರೆ. ಒಂದು ತಿಂಗಳಲ್ಲೇ ಎರಡು ಅಪಘಾತ ಸಂಭವಿಸಿದ್ದು, ನಟ ಅಜಿತ್ ಬಗ್ಗೆ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.

Advertisement

ಪೋರ್ಚುಗಲ್‌ ನಲ್ಲಿ ಕೆಲವು ದಿನಗಳ‌ ಹಿಂದೆಯಷ್ಟೇ ನಡೆದ ಕಾರ್ ರೇಸ್‌ನಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಪ್ರ್ಯಾಕ್ಟೀಸ್ ವೇಳೆ, ಅನಿರೀಕ್ಷಿತವಾಗಿ ಅಜಿತ್ ಕಾರಿಗೆ ಆಕ್ಸಿಡೆಂಟ್ ಆಗಿತ್ತು. ಇದೀಗ ಮತ್ತೊಮ್ಮೆ ಸ್ಪೇನ್‌ನಲ್ಲಿ ನಡೆದ ಪೋರ್ಷೆ ಸ್ಪ್ರಿಂಟ್ ಚಾಲೆಂಜ್‌ನಲ್ಲಿ ಅಜಿತ್ ಕಾರು ಭೀಕರ ಅಪಘಾಗತಕ್ಕೆ ತುತ್ತಾಗಿದ್ದು ಕೂದಲೆಳೆ ಅಂತರದಲ್ಲಿ ಅಜಿತ್‌ ಪಾರಾಗಿದ್ದಾರೆ.

ಅಜಿತ್ ಅವರ ಕಾರಿಗೆ ಅಪಘಾತ ಸಂಭವಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಆರಂಭದಲ್ಲಿ ಗೊಂದಲಕ್ಕೊಳಗಾಗಿದ್ದರು. ಆದರೆ, ಅಪಘಾತ ನಡೆದ ತಕ್ಷಣ ಅಜಿತ್ ತಮ್ಮ ಕಾರಿನಿಂದ ಸೇಫ್‌ ಆಗಿ ಇಳಿಯುವುದನ್ನು ವಿಡಿಯೋದಲ್ಲಿ ನೋಡಿದನ್ನು ಕಂಡ ಅಭಿಮಾನಿಗಳು ನಿಟ್ಟುಸಿರನ್ನು ಬಿಟ್ಟಿದ್ದಾರೆ.

ಈ ಬಗ್ಗೆ ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ”ಅಜಿತ್ ಕಾರು ಆ್ಯಕ್ಸಿಡೆಂಟ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ರೇಸಿಂಗ್ ವೇಳೆ ಅಜಿತ್ ಅವರ ಕಾರು ಇನ್ನೊಬ್ಬ ರೇಸರ್ ಕಾರಿಗೆ ಡಿಕ್ಕಿ ಹೊಡೆದು, ಹಲವು ಬಾರಿ ಪಲ್ಟಿಯಾಗಿದೆ. ವಿಡಿಯೋ ನೋಡಿದ ಅಭಿಮಾನಿಗಳಿಗೆ ಒಂದು ಕ್ಷಣ ಶಾಕ್ ಆಗಿದೆ. ಯಾಕೆಂದರೆ ಆ ರಭಸದಲ್ಲಿ ಹೈ ಸ್ಪೀಡ್‌ನಲ್ಲಿ ಅಜಿತ್ ಅವರ ಕಾರು ಡಿಕ್ಕಿಯಾಗಿದೆ. ಹೀಗಾದರೂ ಛಲ ಬಿಡದೆ ಅಜಿತ್ ಮತ್ತೆ ರೇಸ್‌ಗೆ ಮರಳಿದ್ದಾರೆ. ಈ ಮೂಲಕ ಅಜಿತ್ ಸೇಫ್ ಆಗಿದ್ದಾರೆ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here