ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ಪಡೆದ ನಟ ಚಿರಂಜೀವಿ

0
Spread the love

ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಚಿರಂಜೀವಿ ಅವರಿಗೆ ಬ್ರಿಟಿಷ್ ಸರ್ಕಾರದಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಮಾರ್ಚ್ 19ರಂದು ಇಂಗ್ಲೆಂಡ್​ನ ಪಾರ್ಲಿಮೆಂಟ್​ನಲ್ಲಿ ಚಿರಂಜೀವಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Advertisement

ನಟ ಚಿರಂಜೀವಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಜೊತೆಗೆ ಅನೇಕ ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಅವರ ಈ ಕೊಡುಗೆಗಳನ್ನು ಗುರುತಿಸಿದ ಬ್ರಿಟಿಷ್ ಸರ್ಕಾರ ಅವರಿಗೆ ಜೀವಮಾನ ಸಾಧನೆ ಅವಾರ್ಡ್ ನೀಡಿದೆ.

ಈ ರೀತಿ ಅವಾರ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆಗೆ ನಟ ಚಿರಂಜೀವಿ ಪಾತ್ರರಾಗಿದ್ದಾರೆ. ಸದ್ಯ ಚಿರಂಜೀವಿ ಲಂಡನ್​ನಲ್ಲಿ ಇದ್ದು, ಅಲ್ಲಿನ ಸಂಸತ್ತಿನಲ್ಲಿ ಈ ಗೌರವವನ್ನು ನೀಡಲಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರೋ ಅವರ ಸಹೋದರ ಪವನ್ ಕಲ್ಯಾಣ್ ಅವರು, ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here