ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರಿಗೆ ನ್ಯಾಯಾಲಯದಿಂದ ಪೂರ್ಣ ಜಾಮೀನು ದೊರೆತಿದೆ. ಆಸ್ಪತ್ರೆಯಿಂದ ಕೂಡ ದರ್ಶನ್ ಬಿಡುಗಡೆಯಾಗಿದ್ದಾರೆ. ಇದೀಗ ನಟ ದರ್ಶನ್ ಅವರು ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ನಾಲ್ಕು ವಾರಗಳ ಅನುಮತಿ ಕೇಳಿ ಕೋರ್ಟ್ಗೆ ನಟನ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಸಿಸಿಹೆಚ್ 57 ಕ್ಕೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು ನಟನಿಗೆ ಮೈಸೂರಿಗೆ ಹೋಗುವ ಅವಕಾಶ ಕೋರಿದ್ದಾರೆ.ಸದ್ಯ ಇದಕ್ಕೆ ಅನುಮತಿ ಕೊಡದಂತೆ ಅಕ್ಷೇಪಣೆ ಸಲ್ಲಿಕೆ ಕೂಡ ಆಗಿದೆ. ಸರ್ಕಾರದ ಪರವಾಗಿ ಎಸ್ಪಿಪಿ ಸಚಿನ್ ಚಂದ್ರಹಾಸರಿಂದ ವಾದ ಮಾಡಿದ್ದಾರೆ ಎನ್ನಲಾಗಿದೆ. ಅನುಮತಿ ನೀಡದಂತೆ ವಾದ ಮಂಡನೆ ಕೂಡ ಆಗಿದೆ.
ನಟ ದರ್ಶನ್ ಅವರು ಮೈಸೂರಿಗೆ ತೆರಳಲು ಅನುಮತಿ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ನಾಲ್ಕು ವಾರಗಳ ಅನುಮತಿ ಕೇಳಿ ಕೋರ್ಟ್ಗೆ ನಟನ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಸಿಸಿಹೆಚ್ 57 ಕ್ಕೆ ಅರ್ಜಿ ಸಲ್ಲಿಸಿದ ದರ್ಶನ್ ಪರ ವಕೀಲರು ನಟನಿಗೆ ಮೈಸೂರಿಗೆ ಹೋಗುವ ಅವಕಾಶ ಕೋರಿದ್ದಾರೆ. ವಾದ ಪ್ರತಿವಾದ ಆಲಿಸಿ ನ್ಯಾಯಮೂರ್ತಿ ಗಳು ಸೋಮವಾರಕ್ಕೆ ಆದೇಶ ಕಾಯ್ದಿರಿಸಿದ್ದಾರೆ.