ಚಿಕಿತ್ಸೆಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್!

0
Spread the love

ಮೈಸೂರು: ಮೈಸೂರಿನ ಶ್ರೀರಂಗಪಟ್ಣದ ಬಳಿ ಇರುವ ಫಾರ್ಮ್ ಹೌಸ್ನಲ್ಲಿ ನಟ ದರ್ಶನ್ ಪ್ರತಿ ವರ್ಷದಂತೆ ಈ ವರ್ಷ ಕೂಡ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ  ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದಾರೆ.

Advertisement

ಇಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಡಾ.ಅಜಯ್ ಹೆಗಡೆ ಬಳಿ ಚಿಕಿತ್ಸೆಗೆ ನಟ ಆಗಮಿಸಿದ್ದಾರೆ. L5, S1 ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್‌ಗೆ ಬೆನ್ನಿಗೆ ಇಂಜೆಕ್ಷನ್ ನೀಡಲಾಗಿದೆ. ಇಂಜೆಕ್ಷನ್ ಫಲಿಸದಿದ್ದಲ್ಲಿ 3 ದಿನಗಳ ಬಳಿಕ ಆಪರೇಷನ್ ಮಾಡಲು ನಿರ್ಧರಿಸಲಾಗಿದೆ.

ಇನ್ನೂ ಈ ವೇಳೆ, ಆಪ್ತ ಧನ್ವೀರ್ ಕೂಡ ದರ್ಶನ್ ಜೊತೆ ಆಸ್ಪತ್ರೆಗೆ ಆಗಮಿಸಿದ್ದಾರೆ. ಇನ್ನೂ ರೇಣುಕಾಸ್ವಾಮಿ ಪ್ರಕರಣ ಸಂಬಂಧ ದರ್ಶನ್‌ಗೆ ಮೈಸೂರಿನಲ್ಲಿ ಇರಲು ಜ.12ರಿಂದ ಜ.17ರವರೆಗೆ ಕೋರ್ಟ್ ಅನುಮತಿ ನೀಡಿತ್ತು.


Spread the love

LEAVE A REPLY

Please enter your comment!
Please enter your name here