ಮೈಸೂರು: ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಶೂಟಿಂಗ್ ಇಷ್ಟು ದಿನ ಅರ್ಧಕ್ಕೆ ನಿಂತು ಹೋಗಿತ್ತು. ಈಗ ದರ್ಶನ್ ಅವರು ಮತ್ತೆ ಶೂಟಿಂಗ್ಗೆ ಮರಳುತ್ತಿರುವುದರಿಂದ ಚಿತ್ರೀಕರಣ ಮತ್ತೆ ಶುರು ಆಗುತ್ತಿದೆ.
ಈ ವಿಚಾರ ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ. ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇಂದು ಡೆವಿಲ್ ಚಿತ್ರೀಕರಣಕ್ಕೂ ಮುನ್ನ ನಟ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ಹೌದು ಡೆವಿಲ್ ಶೂಟಿಂಗ್ಗೂ ಮುನ್ನ ದೇವರ ಮೊರೆ ಹೋಗಿದ್ದಾರೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಟ ದರ್ಶನ ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ರು.
ಮೈಸೂರಿನಲ್ಲೇ ಡೆವಿಲ್ ಶೂಟಿಂಗ್ ಸೆಕೆಂಡ್ ಶೆಡ್ಯೂಲ್ ಶುರುವಾಗಿದೆ. ಕಥೆ, ಚಿತ್ರಕಥೆ ಬರೆದು ಮಿಲನ ಪ್ರಕಾಶ್ ಅವರು ಡೆವಿಲ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಶ್ರೀ ಜೈಮಠ ಕಂಬೈನ್ಸ್ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಈ ಚಿತ್ರವನ್ನು ನಿರ್ಮಿಸಿದ್ದಾರೆ.