ನಟ ಜಯಂ ರವಿಗೆ ಭಾರೀ ಬೇಡಿಕೆ ಇಟ್ಟ ಪತ್ನಿ ಆರತಿ: ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶ

0
Spread the love

ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಹಾಗೂ ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಇತ್ತೀಚೆಗೆ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು ನ್ಯಾಯಾಲಯದಿಂದ ಶೀಘ್ರದಲ್ಲೇ ಡಿವೋರ್ಸ್​ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ ಆರತಿ ಅವರು ತಿಂಗಳಿಗೆ 40 ಲಕ್ಷ ರೂಪಾಯಿ ಜೀವನಾಂಶವನ್ನ ಜಯಂ ರವಿ ಅವರಿಂದ ಬೇಕು ಎಂದು ಕೋರ್ಟ್​ಗೆ ಮನವಿ ಮಾಡಿದ್ದಾರೆ.

Advertisement

ಚೆನ್ನೈನಲ್ಲಿರುವ 3ನೇ ಹೆಚ್ಚುವರಿ ಕುಟುಂಬ ಕಲ್ಯಾಣ ನ್ಯಾಯಾಲಯಕ್ಕೆ ಹಾಜರಾಗಿದ್ದ ಜಯಂ ರವಿ ಹಾಗೂ ಆರತಿ ಅವರ ವಿಚ್ಚೇಧನ ಅರ್ಜಿಯನ್ನು ನ್ಯಾಯಾಧೀಶೆ ಥೆನ್ಮೋಳಿ ಅವರು ವಿಚಾರಣೆ ಮಾಡಿದರು. ಕೋರ್ಟ್​ನಲ್ಲಿ ಇಬ್ಬರು ರಾಜೀಯಾಗಲು ಒಪ್ಪಿಲ್ಲ. ಇಬ್ಬರ ನಡುವಿನ ಸಂಬಂಧ ಸರಿಪಡಿಸಿಕೊಂಡು ಸಂಸಾರದಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಡಿವೋರ್ಸ್​ಗೆ ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ವಿಚ್ಚೇಧನ ಅರ್ಜಿ ವಿಚಾರಣೆಯಲ್ಲಿ ಆರತಿ ಅವರು ತನ್ನ ಗಂಡನಿಂದ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂಪಾಯಿಗಳ ಜೀವನಾಂಶವನ್ನು ಕೇಳಿದ್ದಾರೆ. ಗಂಡನಿಂದ ಬೇರೆಯಾಗುತ್ತಿದ್ದರಿಂದ ಕುಟುಂಬ ನಿರ್ವಹಣೆಗಾಗಿ ಹಾಗೂ ಮಕ್ಕಳ ಫೋಷಣೆಗಾಗಿ ತಿಂಗಳಿಗೆ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಅಂದರೆ ವರ್ಷಕ್ಕೆ 4.8 ಕೋಟಿ ರೂಪಾಯಿಗಳನ್ನು ಜಯಂ ರವಿ ಅವರು ನೀಡಬೇಕಾಗುತ್ತದೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಜಯಂ ರವಿ ಹಾಗೂ ಆರತಿ ಮಧ್ಯೆ ಬಿರುಕು ಮೂಡಿದ ಕಾರಣ ಇಬ್ಬರು ದೂರದೂರವಾಗೋ ನಿರ್ಧಾರ ಮಾಡಿದ್ದಾರೆ. ಮತ್ತೆ ಒಂದಾಗಿ ಬಾಳಲು ಒಮ್ಮತ ಸೂಚಿಸದ ಕಾರಣ ಇಬ್ಬರು ಕೂಡ ಲಿಖಿತ ರೂಪದಲ್ಲಿ ಪ್ರತಿಕ್ರಿಯೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನು ಈ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜೂನ್ 12ಕ್ಕೆ ಮುಂದೂಡಿಕೆ ಮಾಡಿದೆ. ಇತ್ತೀಚೆಗಷ್ಟೇ ಇಬ್ಬರು ಇನ್​ಸ್ಟಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು. ಜಯಂ ರವಿ ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಡೇಟಿಂಗ್​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದ್ದು ಇಬ್ಬರು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.


Spread the love

LEAVE A REPLY

Please enter your comment!
Please enter your name here