ಡಿಸೆಂಬರ್‌ 25ಕ್ಕೆ ಕನ್ನಡದಲ್ಲೂ ರಿಲೀಸ್‌ ಆಗಲಿದೆ ನಟ ಮೋಹನಲಾಲ್‌ ಚೊಚ್ಚಲ ನಿರ್ದೇಶನದ ಸಿನಿಮಾ!

0
Spread the love

ಮಾಲಿವುಡ್‌ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ತಮ್ಮ ವೃತ್ತಿ ಜೀವನದ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದಾರೆ. ಈವರೆಗೂ ಸುಮಾರು 40 ವರ್ಷಗಳ ವೃತ್ತಿಜೀವನ ಮತ್ತು 360ಕ್ಕೂ ಹೆಚ್ಚು ಚಿತ್ರಗಳೊಂದಿಗೆ, ಮೋಹನ್‌ಲಾಲ್ ಎಲ್ಲಾ ಪ್ರಕಾರದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಮೂಲಕವೇ ಗಮನ ಸೆಳೆದ ಇದೇ ನಟ ಇದೀಗ “ಬರೋಜ್‌” ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಈಗಾಗಲೇ ಮೇಕಿಂಗ್‌ ಮೂಲಕವೇ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾದ ಕನ್ನಡದ ಟ್ರೇಲರ್‌ ಬಿಡುಗಡೆ ಆಗಿದೆ.

Advertisement

ನಿರ್ದೇಶಕರಾಗಿ ಮೋಹನ್‌ಲಾಲ್‌ಗೆ ಇದು ಮೊದಲ ಚಿತ್ರ. ಚಿತ್ರದ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಾಸ್ಕೋಡಗಾಮಾ ಅರಮನೆಯೊಳಗೆ “ಬರೋಜ್” ಎಂಬ ಭೂತವಿದೆ ಎಂದು ಟ್ರೇಲರ್ ಆರಂಭವಾಗುತ್ತದೆ. ಆ ಬರೋಜ್‌ 100 ವರ್ಷಗಳಿಂದ ಅಲ್ಲಿನ ನಿಧಿಯನ್ನು ಕಾವಲು ಕಾಯುತ್ತಿದ್ದಾರೆ. ಹೀಗೆ ಹೊಸ ಕಾಲ್ಪನಿಕ ಲೋಕದ ಅನಾವರಣ ಮಾಡುತ್ತ, ಅಚ್ಚರಿಯ ಲೋಕವನ್ನು ಪ್ರೇಕ್ಷಕನ ಮುಂದೆ 3Dಯಲ್ಲಿ ಬಿಚ್ಚಿಡಲಿದ್ದಾರೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುವ ಬರೋಜ್‌ ಸಿನಿಮಾ, ಮೂಲ ಮಲಯಾಳಂ ಜತೆಗೆ ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿಯೂ 3ಡಿಯಲ್ಲಿ ಬಿಡುಗಡೆ ಆಗಲಿದೆ. ಭೂತ ಮತ್ತು ವರ್ತಮಾನದ ನಡುವೆ ಟ್ರೈಮ್‌ ಟ್ರಾವೆಲಿಂಗ್‌ ಜಾನರ್‌ನಲ್ಲಿ ಈ ಸಿನಿಮಾ ಸಿದ್ಧವಾಗಿದೆ.

ಅಕ್ಷಯ್ ಕುಮಾರ್ ಅವರ ಸಮ್ಮುಖದಲ್ಲಿ ಇದೇ ಚಿತ್ರದ ಹಿಂದಿ ಟ್ರೈಲರ್ ಬಿಡುಗಡೆ ಆಗಿತ್ತು. ಇದೀಗ ಕನ್ನಡದಲ್ಲಿಯೂ ಟ್ರೇಲರ್‌ ಮೋಡಿ ಮಾಡುತ್ತಿದೆ. ಕಾಲ್ಪನಿಕ ಕಥೆಯ ಮೂಲಕವೇ ವಿಶಿಷ್ಟ ಮೇಕಿಂಗ್‌ನಿಂದಲೂ ಟ್ರೇಲರ್‌ ಶ್ರೀಮಂತವಾಗಿ ಮೂಡಿಬಂದಿದೆ. ಈ ಚಿತ್ರವು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಆಶೀರ್ವಾದ್ ಸಿನಿಮಾಸ್‌ನ ಆಂಟೋನಿ ಪೆರುಂಬವೂರ್ ಬರೋಜ್‌ ಸಿನಿಮಾವನ್ನು ನಿರ್ಮಿಸಿದ್ದಾರೆ. ಪಿವಿಆರ್ ಪಿಕ್ಚರ್ಸ್ ಈ ಸಿನಿಮಾವನ್ನು ವಿತರಿಸುತ್ತಿದ್ದಾರೆ. ಮೋಹನ್‌ಲಾಲ್ ನಿರ್ದೇಶನದ ಚೊಚ್ಚಲ ಬರೋಜ್ ಚಿತ್ರಕ್ಕೆ ಸಂತೋಷ್‌ ಶಿವನ್‌ ಛಾಯಾಗ್ರಹಣ, ಅಜಿತ್‌ ಕುಮಾರ್‌ ಸಂಕಲನವಿದೆ.


Spread the love

LEAVE A REPLY

Please enter your comment!
Please enter your name here