ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಅವರು ನಿಧನರಾಗಿದ್ದಾರೆ. ಅಗಲಿದ ಹಿರಿಯ ಕಲಾವಿದನಿಗೆ ಗಣ್ಯರು, ಸ್ಯಾಂಡಲ್ವುಡ್ನ ಹಿರಿಯ ನಟರು ಅಂತಿಮ ನಮನ ಸಲ್ಲಿಸಿದ್ದಾರೆ.
ಇದೀಗ ನಟ ಸರಿಗಮ ವಿಜಿ ಅಂತ್ಯಕ್ರಿಯೆ ಇಂದು ಬಲಿಜ ಸಂಪ್ರದಾಯದಂತೆ ನಡೆಯಿತು. ಚಾಮರಾಜಪೇಟೆ ಚಿತಾಗಾರದಲ್ಲಿ ನಟನ ಕಾರ್ಯ ನೆರವೇರಿದೆ. ಹಿರಿಯ ಪುತ್ರ ರೋಹಿತ್ ಅವರು ತಂದೆ ಸರಿಗಮ ವಿಜಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದರು.
ಇನ್ನೂ ರವೀಂದ್ರ ಕಲಾಕ್ಷೇತ್ರದಲ್ಲಿ ನಟನ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ, ನಟ ಧ್ರುವ ಸರ್ಜಾ, ಹಿರಿಯ ನಟ ಸುಂದರ್ ರಾಜ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ನಟಿ ರೂಪಿಕಾ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದ್ದರು.



