ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುಮಾರು 6 ಗಂಟೆಗಳ ಕಾಲ ನುರಿತ ವೈಧ್ಯರ ತಂಡ ಆಪರೇಷನ್ ಮಾಡಿದೆ.
ಭಾರತೀಯ ಕಾಲಮಾನ ಮಂಗಳವಾರ (ಡಿಸೆಂಬರ್ 24) ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂಬ ವಿಚಾರ ಶಿವಣ್ಣನ ಆಪ್ತ ಮೂಲಗಳು ತಿಳಿಸಿವೆ.
ಶಿವರಾಜ್‌ಕುಮಾರ್‌ಗೆ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ.
ಶಿವರಾಜ್ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋದರು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ.