ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಜಾಮೀನು ಸಿಗಲಿದೆ ಎಂಬ ನಂಬಿಕೆ ಇದೆ. ಒಂದು ವೇಳೆ ಬೇಲ್ ಸಿಗದಿದ್ರೆ ನಾನೇ ಜೈಲಿಗೆ ಹೋಗಿ ಆಶೀರ್ವಾದ ಪಡೆದು ಬರ್ತೀನಿ” ಎಂದು ನಟ ಝೈದ್ ಖಾನ್ ಭಾವುಕರಾಗಿ ಹೇಳಿದ್ದಾರೆ.
ಹಾವೇರಿಯಲ್ಲಿ ನಡೆದ ಕಲ್ಟ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದರ್ಶನ್ ಬಗ್ಗೆ ತಮ್ಮ ಭಾವನೆಗಳನ್ನು ತೆರೆದಿಟ್ಟರು. ನೋವಿನ ಮಧ್ಯೆಯೂ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿರುವುದು ದರ್ಶನ್ ಅಣ್ಣನ ದೊಡ್ಡತನ. ‘ದರ್ಶನ್’ ಅನ್ನೋ ಹೆಸರೇ ಸಿನಿಮಾಗೆ ಶಕ್ತಿ. ಡೆವಿಲ್ ಸಿನಿಮಾ ತುಂಬಾ ಚೆನ್ನಾಗಿದೆ” ಎಂದು ಝೈದ್ ಖಾನ್ ಪ್ರಶಂಸಿಸಿದರು.
ಇನ್ನು ತಂದೆ ಜಮೀರ್ ಅಹ್ಮದ್ ಅವರ ರಾಜಕೀಯ ವಿವಾದಗಳು ತಮ್ಮ ಸಿನಿಮಾಗೆ ಹೊಡೆತ ನೀಡಿದೆಯೇ ಎಂಬ ಪ್ರಶ್ನೆಗೆ, “ಹೌದು, ಅದರ ಪರಿಣಾಮ ಆಯ್ತು. ನನ್ನ ಸಿನಿಮಾಗೆ ಬಾಯ್ಕಾಟ್ ಕೂಡ ಆಯ್ತು. ಆದರೆ ಗೆದ್ದ ಮೇಲೆ ಮಾತನಾಡಿದ್ರೆ ಅದರ ತೂಕ ಬೇರೆ ಇರುತ್ತೆ” ಎಂದು ಹೇಳಿದರು.
ಪೈರಸಿ ಮಾಡುವವರ ಬಗ್ಗೆ ಎಚ್ಚರಿಕೆ ನೀಡಿದ ಅವರು, “ಮಾಡುವವರು ಮಾಡ್ತಾರೆ. ಆದರೆ ಸಿಕ್ಕಿಬಿದ್ರೆ ಬಿಡಲ್ಲ” ಎಂದು ಕಠಿಣ ಸಂದೇಶ ನೀಡಿದರು.



