ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮದುವೆಯ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟಿ ಇದೀಗ ಎಂಟು ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದಾರೆ. ಅದೇ ಎಜರ್ನಿಯಲ್ಲಿ ನಟಿ ಚಿತ್ರರಂಗಕ್ಕೆ ರೀ ಎಂಟ್ರಿಕೊಡೋಕೆ ಸಜ್ಜಾಗಿದ್ದು ಅಮೂಲ್ಯರನ್ನು ಮತ್ತೆ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
ಹುಟ್ಟುಹಬ್ಬದ ದಿನದಂದೇ ಅಮೂಲ್ಯ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದ ಮೂಲಕ ಅಮ್ಮು ಮತ್ತೆ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.ʼ
ಈ ಹಿಂದೆ ಅಮೂಲ್ಯಗೆ ‘ಶ್ರಾವಣಿ ಸುಬ್ರಮಣ್ಯ’ ರೀತಿಯ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್ ಅವರೇ ಪೀಕಬೂ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅಮೂಲ್ಯ ಅವರ ಹುಟ್ಟುಹಬ್ಬದಂದೇ ಈ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸಣ್ಣದಾದ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಅಮೂಲ್ಯ ಕೂಡ ತಮ್ಮ ಕಮ್‌ಬ್ಯಾಕ್‌ಗಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವುದು ಟೀಸರ್ ನಲ್ಲಿಯೇ ಗೊತ್ತಾಗಿದೆ.
ಮದುವೆ, ಮಕ್ಕಳ ನಂತರ ನಟಿ ಅಮೂಲ್ಯ ನಟನೆಗೆ ವಾಪಸ್ ಆಗಿದ್ದಾರೆ. ಹುಟ್ಟುಹಬ್ಬದ ದಿನವೇ ಸಿನಿಮಾ ನಟನೆ ಬಗ್ಗೆ ಗುಡ್ನ್ಯೂಸ್ ಕೊಟ್ಟಿರುವ ನಟಿ, ಮಂಜು ಸ್ವರಾಜ್ ನಿರ್ದೇಶನದ ‘ಪೀಕಬೂ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಮಂಜು ನಿರ್ದೇಶನದ ‘ಶ್ರಾವಣಿ ಸುಬ್ರಹ್ಮಣ್ಯ’ ಸಿನಿಮಾದಲ್ಲಿ ನಟಿ ಅಮೂಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಈ ಟೀಸರ್ ಡ್ಯಾನ್ಸ್‌ನಲ್ಲಿ ಅಮೂಲ್ಯಗೆ ವಿ ನಾಗೇಂದ್ರ ಅವರು ಕೊರಿಯೋಗ್ರಾಫ್ ಮಾಡಿದ್ದು, ಸಖತ್ ಫನ್ನಿ ಎನಿಸುವ ಮ್ಯೂಸಿಕ್‌ಗೆ ಸಿಂಗಲ್ ಟೇಕ್‌ನಲ್ಲಿ ಅಮೂಲ್ಯ ಸ್ಟೆಪ್ಸ್ ಹಾಕಿದ್ದಾರೆ. ಅಂದಹಾಗೆ, ಅಮೂಲ್ಯ ಕೊನೆಯದಾಗಿ 2017ರಲ್ಲಿ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಅದೇ ವರ್ಷ ‘ಮುಗುಳು ನಗೆ’ ಚಿತ್ರದಲ್ಲಿ ಅತಿಥಿ ಪಾತ್ರವೊಂದನ್ನು ಪೋಷಿಸಿದ್ದರು. ಆನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟಿ ಇದೀಗ ಭರ್ಜರಿ ಕಂಬ್ಯಾಕ್ ಗೆ ಸಿದ್ದವಾಗಿದ್ದಾರೆ.